ವರಮಹಾಲಕ್ಷ್ಮಿ ಹಬ್ಬಕ್ಕೆ 2 ಸುಲಭದ ಆರತಿ ಹಾಡು ಹಾಡಿದ್ದೇನೆ. ಕೇಳಿ ಕಲಿತು ಶುಕ್ರವಾರ ಪೂಜೆಗೆ ಹಾಡಿ ಎಲ್ಲರೂ...ಹಾಡಿನ ಲಿರಿಕ್ಸ್ ಕೆಳಗೆ ಕೊಡುತ್ತಿದ್ದೇನೆ..
ಮೊದಲನೇ ಹಾಡು:
ಕ್ಷೀರಸಾಗರ ಪುತ್ರಿ ಕ್ಷೀರಾಬ್ದಿ ಶಯನ ನ
ಮಡದಿ ಮಹಾಲಕ್ಷ್ಮಿ ನಿನಗಾರತಿ
ಪಂಕಜ ಲೋಚನೆ ಪಂಕಜ ಮುಖಿಯೇ
ಪಂಕಜ ವಾಸಿನಿ ಪುಷ್ಪಾರತಿ
ಶ್ರೀ ವರಮಹಾಲಕ್ಷ್ಮಿ ನಿನಗಾರತಿ..2
ಶ್ರೀರಂಗನಾಯಕಿಯ ಶ್ರೀಪದು ಮಾವತಿ
ಶ್ರೀ ಸೀತ ಮಾತೆಯೇ ಸೊಗದಾರತಿ
ಶ್ರೀದೇವಿ ಭೂದೇವಿ ಶ್ರೀ ರುಕ್ಮಿಣಿದೇವಿ
ಶ್ರೀ ಚಕ್ರ ವಾಸಿನಿ ರತ್ನ ಆರತಿ
ಶ್ರೀ ವರ ಮಹಾಲಕ್ಷ್ಮಿ ನಿನಗಾರತಿ...2
ಶ್ರೀಲಕ್ಷ್ಮಿ ಜಯಲಕ್ಷ್ಮಿ ವರಲಕ್ಷ್ಮಿ ಧನಲಕ್ಷ್ಮಿ
ಭಾಗ್ಯದ ಲಕ್ಷ್ಮೀಯೇ ನಿನಗಾರತಿ
ಶುಭಲಕ್ಷ್ಮಿ ಸುಖ ಲಕ್ಷ್ಮಿ ಸತ್ಯ ಲಕ್ಷ್ಮಿಯೇ ದೇವಿ
ಮೋಕ್ಷ ಲಕ್ಷ್ಮಿಯೇ ಮಾತೆ ಮುದ ದಾರತಿ
ಶ್ರೀ ವರ ಮಹಾಲಕ್ಷ್ಮಿ ನಿನಗಾರತಿ...3
*******
2 ನೆ ಹಾಡು:
ಮುತ್ತು ಪಚ್ಚೆ ಕೆಂಪು ರತ್ನ ಹವಳದಾರತಿ
ಮತ್ತೆ ಮತ್ತೆ ಬೆಳಗುವೆನು ವಜ್ರದ ಆರತಿ
ಭುವನೇಶ್ವರಿ ಜಗದೀಶ್ವರಿ ಬನಶಂಕರಿ ನಿನಗೆ
ಭಕ್ತಿ ಪ್ರೇಮದಿಂದಲಿ ಬೆಳಗುವೆ ನಾ ಆರತಿ
ಭೈರವಿ ಶಾಂಭವಿ ಜಾನ್ನವಿ ನಿನಗೆ
ಆತ್ಮಜ್ಯೋತಿ ಇಂದಲಿ ಬೆಳಗುವೆನು ಆರತಿ ||ಮುತ್ತು||
ದೇವಿ ಶಾರದಾಂಬೆಯ ಚರಣದಾಸಿ ವಂದಿಸುವೆ
ಭವ್ಯ ದಿವ್ಯ ರೂಪಿಣಿ ರಾಜರಾಜೇಶ್ವರಿ
ಚಿತ್ತದಲಿ ನೆಲೆಸಿರುವ ಚಿದ್ರೂ ಪಿಣಿ ನಿನಗೆ
ಚಿನ್ನದ ಹರಿವಾಣದಲಿ ಬೆಳಗುವೆನು ಆರತಿ ||ಮುತ್ತು||
***********
Please support my channel by like, share and subscribe 🙏
/ @shyamalavlogs-jd21m
*********
If any business enquiries please contact:
ahyamalamonu89@gmail.com
*********
#singing #cooking #painting #weightlossdiet #cooking #food #weightloss #weightlossadvice #painting #drawing #travel #health tips#kitchen tips#breakfast eecipes#lunch& dinner recipes ##rangoli#etc.
Негізгі бет 2 easy aarati songs for varamahalakshmi festival# beautiful songs # lyrics in discription 🙏
Пікірлер: 114