A humble offering to Lord Sri Krishna by Vidushi Smt Apoorvlakshmi P V
A krithi of Sri Purandaradasa
Raaga - Yaman
Tala - Khanda Chapu
Composed by - Ganakalabhushana Vid R K Padmanabha
Concept and Music Direction - Vid Shubha Santosh
ಅಂಬೆಗಾಲಿಕ್ಕುತಲಿ ಬಂದ ಗೋವಿಂದ ॥ ಪಲ್ಲವಿ॥
ಅಂಬುಜನಾಭನು ದಯದಿಂದ ಎನ್ನ ಮನೆಗೆ ॥ ಅನುಪಲ್ಲವಿ॥
ಜಲಚರ ಜಲವಾಸ ಧರಣಿಧರ ಮೃಗರೂಪ
ನೆಲನಳಿದು ಮೂರಡಿ ಮಾಡಿಬಂದ
ಕುಲನಾಶ ವನವಾಸ ನವನೀತ ಚೋರನಿವ
ಲಲನೆಯರ ವ್ರತಭಂಗ ವಾಹನ ತುರಂಗ ॥ ೧ ॥
ನೀರ ಪೋಕ್ಕನು ಗಿರಿಯನೆಗಹಿ ಧರಣಿಯ ತಂದು
ನರಮೃಗ ಬಳಿಬಂಧ ಕೊರಳಗೊಯ್ಯಿಕ
ಶರಮುರಿದು ಒರಳೆಳೆದು ನಿರವಾಣಿ ಹಯಹತ್ತಿ
ಪುರಂದರವಿಠಲ ಮನೆಗೆ ತಾ ಬಂದ || ೨ ||
ಗೋವಿಂದನ ಅಕ್ಕರೆಯ ಗೋಸೇವೆ
ತುಂಟ ಶ್ರೀ ಕೃಷ್ಣ ಅಣ್ಣನೊಂದಿಗೆ ಕರುಗಳ ಬಾಲ ಹಿಡಿದು, ಆಚೆ - ಈಚೆ ಸೆಳೆಯಲ್ಪಟ್ಟು ಆಟವಾಡುತ್ತಿದ್ದ. ತುಂಟತನದಲ್ಲೂ, ಅಕಾಲದಲ್ಲಿ ಕರುಗಳನ್ನು ಪಾಶದಿಂದ ಬಿಚ್ಚಿ ಹಸುಗಳ ಹಾಲನ್ನುಕುಡಿಸುತ್ತಾ ವಾತ್ಸಲ್ಯ ತೋರುತ್ತಿದ್. ಕುರಿ ಗಾತ್ರದ ಕರುಗಳನ್ನುಚೆನ್ನಾಗಿ ವತ್ಸವಾಟದಲ್ಲಿ, ಐದು ವರ್ಷದ ಬಾಲಕನಾಗಿರುವಾಗಮೇಯಿಸಿ ಕರಿಗಾತ್ರದ ಕರುಗಳನ್ನಾಗಿ ಬೆಳೆಸುತ್ತಿದ್ದ.
ಗೋವುಗಳನ್ನು ಇಂದ್ರ ಸುರಿಸಿದ ಮಳೆಯಿಂದ ತಾನು ಎತ್ತಿದಗೋವರ್ಧನ ಗಿರಿಯ ಕೆಳಗೆ, ಆಶ್ರಯ ನೀಡಿ, ರಕ್ಷಿಸಿ , ಇಂದ್ರನಿಂದ(ಗೋರಕ್ಷಕ ಎಂಬ ಅರ್ಥದಲ್ಲಿ) ಗೋವಿಂದ ನಾಮವನ್ನು ಪಡೆದವ. ಗೋ-ಕರುಗಳ ರಕ್ಷಣೆಯಿಂದ ಪ್ರೀತಳಾದ, ಸ್ವರ್ಗದ ಸುರಭಿಯಿಂದ ಕ್ಷೀರಾಭಿಷೇಕದಿಂದ ಪೂಜಿತನಾದವ.
ದಾವಾಗ್ನಿ, ವಿಷ ಜಲ, ವೃಕ್ಷ ರೂಪ ಉಗ್ರಾಸುರನವಿಷಾನಲಗಳಿಂದಲೂ ಗೋವುಗಳನ್ನು ರಕ್ಷಿಸಿದವ. ಗಹನವನಕ್ಕೆಹುಲ್ಲಿನ ಆಸೆಯಿಂದ ಪ್ರವೇಶಿಸಿ ದಾರಿ ತಪ್ಪಿದ ಗೋವುಗಳುಕೂಗುತ್ತಿರುವಾಗ, ತನ್ನ ಮೇಘ ಗಂಭೀರ ಧ್ವನಿಯಿಂದಪ್ರತಿಯೊಂದು ಹಸುವಿನ ಹೆಸರುಗಳನ್ನು ಹೇಳಿ, ಪ್ರೀತಿಯಿಂದಕರೆದು,ಅಂಬಾ ಎಂಬ ಪ್ರತಿಧ್ವನಿಗೈದು ಹರ್ಷದಿಂದ ಅವುಗಳುತನ್ನತ್ತ ಧಾವಿಸಿ ಬರುವಂತೆ ಮಾಡಿದವ.
ನಂದವ್ರಜದ ಬೃಹದ್ವನದಲ್ಲಿ ಹಸುಗಳಿಗೆ ನೆರಳು, ನೀರು, ಮೇವುಗಳ ಬರ ಬಂದಾಗ, ಗೋವುಗಳ ಸುಗ್ರಾಸಕ್ಕಾಗಿಗೋವರ್ಧನಗಿರಿಯಿಂದ ಭೂಷಿತವಾದ, ಬೃಂದಾವನಕ್ಕೆಅವುಗಳನ್ನು ಸ್ಥಳಾಂತರಿಸಿದವ.
ತನ್ನ ವೇಣು ನೀನಾದದ ರಸವನ್ನುಣಿಸಿ ಗೋವುಗಳು ಮೇವನ್ನುಮರೆಯುವಂತೆ ಮೋಡಿ ಮಾಡಿದವ.
" ಗೋಷ್ಠೇಗಾ ಯವಸಾದಿನಾ " ಹಟ್ಟಿಯಲ್ಲಿ ಹಸುಗಳನ್ನುಎಳೆಹುಲ್ಲು, ಹಿಂಡಿ, ಗುಡ , ಹಣ್ಣು-ಹಂಪಲುಗಳನ್ನು, ಚೆನ್ನಾಗಿತಿನ್ನಿಸಿ ಅವುಗಳ ಮೈಯನ್ನು ಚೆನ್ನಾಗಿ ತುರಿಸಿ, ತೃಪ್ತಿ ಪಡಿಸುವುದು, ಗೋ ಪ್ರತೀಕದಲ್ಲಿ ತನ್ನ ಆರಾಧನೆ ಎಂದು ಕರೆಕೊಟ್ಟವ.
ಇಂತಹ ಗೋವಿಂದನ ಅಕ್ಕರೆಯ ಗೋಸೇವೆ, ಗೋವಿಂದಭಕ್ತಾರಾದ ನಮಗೆಲ್ಲರಿಗೂ ಪ್ರೇರಣಾದಾಯಿಯಾಗಲಿ,
ಎಂದು ಹಾರೈಸುವ,
ಶ್ರೀ ವಿದ್ಯೇಶ ತೀರ್ಥರು,
ಶ್ರೀ ಭಂಡಾರಕೇರಿ ಮಠ,
ಶ್ರೀ ಕೃಷ್ಣ ಜನ್ಮಾಷ್ಟಮಿ,
06-09-2023
Veena - Vidushi Shubha Santhosh
Violin - Vidwan Pradesh Aachaar
Flute - Vidwan Jayaram Kikkeri
Mridanga - Vidwan Phaneendra Bhaskara
Tala - Vidwan Venkatesh Purohit
Recording, Mixing & Mastering - Srinidhi, Omkar at Omkar Studios
Location Courtesy: Pajaka Farms, Phalamrutha (Shri. Arun)
DOP: Sharath Sreenivasa & Team
Sharath Sreenivasa, Rakesh V C,
Samana Sharath, Deepak V C
Edited by: Abhishek Joshi
Негізгі бет Музыка Ambegalikkutali banda Govinda - Raaga Yaman - Khanda Chapu Tala
Пікірлер: 76