#neethuvanajakshi #bigbossneethu #kannadapodcast #interview #rajeshreveals #rajeshgowda #rjrajesh
ಗಂಡಾಗಿ ಹುಟ್ಟಿ ಪ್ರಕೃತಿ ನಿಯಮದಂತೆ ಹೆಣ್ಣಾಗಿ ಬದಲಾದ ನೀತು, ಸಮಾಜ ತಮ್ಮ ಮೇಲೆ ಎಸೆದ ಎಲ್ಲ ಸವಾಲುಗಳನ್ನು ಧೀರತೆಯಿಂದ ಮೆಟ್ಟಿನಿಂತು ಲಕ್ಷಾಂತರ ಮಂದಿಗೆ ಸ್ಪೂರ್ತಿಯಾಗುವಂಥಹಾ ಉದ್ಯಮಿಯಾಗಿ ಬೆಳೆದಿದ್ದಾರೆ. ಬಿಗ್ಬಾಸ್ ಮನೆಗೆ ಕಾಲಿಟ್ಟಿರುವ ನೀತು ವನಜಾಕ್ಷಿ, ತನ್ನಂಥಹಾ ಅನೇಕರ ಬದುಕಿನಲ್ಲಿ ಸ್ಪೂರ್ತಿ ತುಂಬಲೆಂದು ತಾವಿಲ್ಲಿ ಬಂದಿರುವುದಾಗಿ ಹೇಳಿಕೊಂಡಿದ್ದಾರೆ
ಗದಗದಲ್ಲಿ ಮಂಜುನಾಥನಾಗಿ ಹುಟ್ಟಿ ಬಳಿಕ ಹೆಣ್ಣಾಗಿ ಬದಲಾಗಿ ನೀತು ಎಂದಾದರು. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ನೀತು ಅದನ್ನೇ ಬಂಡವಾಳವಾಗಿಟ್ಟುಕೊಂಡು ಟ್ಯಾಟೂ ಕಲಾವಿದೆ ಆದರು. ಅದರಿಂದ ಬಂದ ಹಣದಲ್ಲಿ ಬ್ಯೂಟಿ ಪಾರ್ಲರ್ ತೆರೆದರು. ಅದಾದ ಬಳಿಕ ಉತ್ತರ ಕರ್ನಾಟಕದ ಸೊಗಡಿನ ಆಹಾರವನ್ನು ಗ್ರಾಹಕರಿಗೆ ಉಣಬಡಿಸುವ ಹೋಟೆಲ್ ಒಂದನ್ನು ಅಮ್ಮನೊಂದಿಗೆ ಸೇರಿ ತೆರೆದರು. ಮಾಡೆಲಿಂಗ್ ಮಾಡಿದರು, ಫ್ಯಾಷನ್ ಶೋಗಳಲ್ಲಿ ಟ್ರ್ಯಾನ್ಸ್ಜೆಂಡರ್ ಬ್ಯೂಟಿ ಪೆಜೆಟ್ಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ.
Негізгі бет ಅವತ್ತು ರೂಮಿನಲ್ಲಿ ಬಟ್ಟೆ ಒಗೆಯುತ್ತಿದಾಗ ಅವನು ಕೇಳಿದ್ದು? | Neethu Vanajakshi | Rajesh Reveals Special
Пікірлер: 5