#bhajane #dasarapadagalu #hanuman
ಬಿಡುವೇನೇನಯ್ಯ ಹನುಮ ಬಿಡುವೇನೇನಯ್ಯ||
ಬಿಡುವೆನೇನು ಹನುಮ ನಿನ್ನ ಅಡಿಗಳಿಗೆ ಶಿರವ ಬಾಗಿ|
ಜ್ಞಾನ ಭಕ್ತಿ ವೈರಾಗ್ಯವನು ಕೊಡುವ ತನಕ ಸುಮ್ಮನೇ ನಾನು||
ಹಸ್ತವನ್ನು ಎತ್ತಿದರೇನು| ಹಾರಕಾಲು ಹಾಕಿದರೇನು|
ಭಕ್ತನು ನಿನ್ನವನು ನಾನು| ಹಸ್ತಿವರದನ ತೋರುವ ತನಕ||
ಹಲ್ಲುಮುಡಿಯ ಕಟ್ಟಿದರೇನು| ಅಂಜುವೆನೇನೋ ನಿನಗೆ ನಾನು|
ಪುಲ್ಲನಾಭನಲ್ಲಿ ಮನಸು| ನಿಲ್ಲಿಸೊ ತನಕಸುಮ್ಮನೆ ನಾನು||
ಡೊಂಕು ಮೋರೆ ಬಾಲವ ತಿದ್ದಿ| ಹೂಂಕರಿಸಿದರೆ ಅಂಜುವನಲ್ಲ|
ಕಿಂಕರನ ಕಿಂಕರನು ನಾನು| ವೆಂಕಟ ವಿಠಲನ ತೋರುವ ತನಕ||
Негізгі бет ಬಿಡುವೇನೇನಯ್ಯ ಹನುಮ | Biduvenenayya hanuma with lyrics | Venkata vittala
Пікірлер: 4