ಚೆಲುವಯ್ಯ ಚೆಲುವೋ / ಜಾನಪದ ಗೀತೆ / Cheluvayya Cheluvo / Folk song
ಚೆಲುವಯ್ಯ ಚೆಲುವೊ ತಾನಿ ತಂದಾನ
ಚಿನ್ಮಯ ರೂಪೇ ಕೋಲನ್ನ ಕೋಲೆ
ಬೆಟ್ಟದ್ಮೇಗಳ ಜಲ್ಲೆಬಿದಿರು ಬೇಲಿ ಮ್ಯಾಗಳ ಸೋರೆಬುರುಡೆ
ಲೋಲು ಕಿಂದರಿ ನುಡಿಸೋರ್ಯಾರಯ್ಯ /
ಲೋಲು ಕಿಂದರಿ ನುಡಿಸುತ್ತಾನೆ ಕೇರಿ ಕೇರಿ ತಿರುಗುತ್ತಾನೆ
ನಮ್ಮ ಕೇರಿಗ್ಯಾಕೆ ಬರುವಯ್ಯ || ಚೆಲುವಯ್ಯ ||
ನಮ್ಮ ಕೇರಿಗ್ ಬಂದರೀಗ ಕರಿಯ ಕಂಬ್ಳಿ ಗದ್ಗೆ ಹೂಡಿ
ತಂದು ಕೊಡುವೆ ಗಂಧವೀಳ್ಯಾವಾ ||
ಗಂಧನಾದ್ರು ಧರಿಸುತ್ತೀನಿ ವೀಳ್ಯನಾದ್ರು ಮೆಲ್ಲುತೀನಿ
ಬಂದ ಕಾರ್ಯ ಹೇಳೆ ಅಮ್ಮಯ್ಯ || ಚೆಲುವಯ್ಯ ||
ಎತ್ತಿಗಂತ ನೀನು ಬಾರೆ ಎಮ್ಮೆಗಂತ ನಾನು ಬರ್ತೀನಿ
ಕುಂತು ನಿಂತು ಮಾತನಾಡೋಣ ||
ಊರಿಗಂತ ನೀನು ಬಾರೋ ನೀರಿಗಂತ ನಾನು ಬರ್ತೀನಿ
ಕುಂತು ನಿಂತು ಮಾತನಾಡೋಣ || ಚೆಲುವಯ್ಯ ||
Негізгі бет Cheluvayya Cheluvo /Folksong - Keyboard BS Jagadeesha Chandra / ಚೆಲುವಯ್ಯ ಚೆಲುವೋ / ಜಾನಪದ ಗೀತೆ
Пікірлер: 3