🚩
ದೇವೀ ಪೂಜೆ
ಭಾಗ -1
^^^^^^^^^^^
☀️ಭಗವಂತ ಕೇವಲ ಪೂಜಿಸುವ ಮೂರ್ತಿಯಲ್ಲ..
🌹ಅದೊಂದು ಪ್ರತಿಸ್ಪಂದಿಸುವ "ಪ್ರೇಮದ" ಚೈತನ್ಯ.
ಹಾಗಾದರೆ
ಹತ್ತಿರ ಹೋಗುವ ದಾರಿ... ಒಲಿಸಿಕೊಳ್ಳುವ ಪರಿ...??
🔥ಶಕ್ತಿ, ಪ್ರೇಮ, ಅನುಗ್ರಹ ಪಡೆಯುವುದು ಹೇಗೆ....??
🙏ಭವಾನಿ ಭಾವನಾ ಗಮ್ಯ🙏
💐ಪೂಜಿಸುವ ವಿಧಾನ ಯಾವುದು...??
ಈ ಎಲ್ಲಕ್ಕೂ ಅಪ್ಪಾಜಿಯವರ ಮಾರ್ಗದರ್ಶನ
ಜಗನ್ಮಾತೆ ಸೇವೆಯಲ್ಲಿ
ಹೇಮಾ ವಿಜಯಕುಮಾರ್
+91 98454 58792
ಸಂಗಮೇಶ ಭಾರದ್ವಾಜ್
+91 83174 45010
ಕಾರ್ತಿಕ್ ಭಾರದ್ವಾಜ್
+91 77604 04626
------====-------=====-------=-===---=--==
☀️ಲಲಿತಾ ಪೂಜೆಯ ಕನ್ನಡ ಮಂತ್ರ☀️
🌺ಮಂಗಳ ಶ್ಲೋಕ🌺
ಶ್ರೀಗುರುವಿನಡಿಗೆರಗಿ ಗಣಪತಿಗೆ ತಲೆಬಾಗಿ|
ಶಾರದೆಗೆ ಸೆರಗೊಡ್ಡಿ ಬೇಡುತೀಗ|
ಸಾಗರಾವೃತ ಭೂಮಿಗಾಧಾರ ಶಕ್ತಿ|
ಸಂಪನ್ನೆ ದೇವಿಯ ಪೂಜೆ ಮಾಳ್ಪೆನೀಗ ||1||
🙏ಧ್ಯಾನ🙏
ಶ್ರೀ ಲಲಿತೆ ಶುಭಗಾತ್ರೆ ಸರಸಿಜೋಪಮ ನೇತ್ರೆ|
ಕೋಟಿ ಸೂರ್ಯಪ್ರಭೆಯ ದೇವಿ ನೀನು||
ಲಾಲಿಸುತ ಪೊರೆಯಮ್ಮ ಲೋಕ ಮೂರರ ಮಾತೆ|
ಎಂದು ಧ್ಯಾನಿಸುತಿರುವೆನೀಗ ನಾನು || 2 ||
🔥ಆವಾಹನ
ವಿಶ್ವವಂದಿತೆ ದೇವಿ ಸಕಲಕಾಧಾರೆ ನೀನೆಂದು ನಮಿಸುವೆ ನಿನ್ನ ಚರಣಯುಗವ||
ವಿಶ್ವತೋಮುಖರೂಪೆಗಾವಾಹನೆಯ ಮಾಳ್ಪ |
ಧೈರ್ಯವಂ ಕ್ಷಮಿಸೆಂದು ಬೇಡುತಿರುವೆ || 3 ||
💮ಆಸನ
ನಿನ್ನ ಸೂತ್ರದೊಳಿಹುದು ಸೂತ್ರನಾಟಕವೆಲ್ಲ ನೀನಿರುವೆ ವಿಶ್ವಕಾಧಾರವಾಗಿ ||
ಸನ್ನುತಾಂಗಿಯೆ ನಿನಗೆ ಆಸನವನೆಂತಿಡಲಿ|
ಪೇಳಿ ಪಾಲಿಪುದೆನ್ನ ಲೋಕಮಾತೆ ||4||
👣ಪಾದ್ಯ
ಪಂಕಜೋದ್ಭವೆ ದೇವಿ ವಾಗ್ದೇವಿ ಗಿರಿಜಾತೆ|
ಪಾಕಶಾಸನವಂದ್ಯ ಪಾದಪದ್ಮೆ||
ಬಿಂಕವೆಲ್ಲವ ಬಿಟ್ಟುಪಾದ್ಯವನ್ನರ್ಪಿಪೆನು
ಸರ್ವಮಂಗಳೆ ನಿನ್ನ ಚರಣಕೀಗ||5||
🤲ಅಘ್ರ್ಯ
ಅಭಯ ಹಸ್ತವ ನೀಡು ಕಮಲಾಕ್ಷಿ ದೇವಿ ನೀನುರುತರದ ಪ್ರೇಮದಿಂ ಪೊರೆಯುತೆನ್ನ ||
ಸಭಯಭಕ್ತಿಯೀಗಳರ್ಪಿಸುವ ಅಘ್ರ್ಯವಂ|
ಸ್ವೀಕರಿಸಿ ಪೊರೆಯಮ್ಮ ಲೋಕಮಾತೆ||6||
💧ಆಚಮನ
ವಿಮಲ ಗಂಗಾದೇವಿ ಪಾಪನಾಶಕತೇಜೆ|
ಸರ್ವಪಾವನರೂಪೆ ಪುಣ್ಯಜನನಿ||
ಕಮಲಾಕ್ಷಿದೇವಿ ನಾನಾಚಮನವನ್ನರ್ಪಿಸುವೆ|
ಪಾಪಪುಣ್ಯವ ಮರೆಸಿ ಪೊರೆಯೆ ತಾಯೆ||7||
Негізгі бет 🌹ದೇವೀ ಪೂಜೆ-1🌹: ಭಕ್ತಿಯಿಂದ "ಜಗನ್ಮಾತೆ" ಶಕ್ತಿ, ಅನುಗ್ರಹ ಪಡೆಯುವ ಮಾರ್ಗ
Пікірлер: 180