ದೇಶವೆ ಮೊದಲು ಎನ್ನೋಣ
ಭಾರತ ಮಾತೆಗೆ ನಮಿಸೋಣ
ಕಲಿಗಳ ಕವಿಗಳ ಯೋಧರ ಸ್ಮರಿಸಿ
ನಿತ್ಯ ಉತ್ಸವವ ಮಾಡೋಣ
ನಿತ್ಯೋತ್ಸವವನು ಮಾಡೋಣ
ದೇಶವ ಕಟ್ಟಲು ದುಡಿದವರೆಷ್ಟೋ
ಅವರ ತ್ಯಾಗವ ಸ್ಮರಿಸೋಣ
ದೇಶ ಪ್ರೇಮವೇ ನಾಡಿನ ಏಳಿಗೆ
ಕೋಟಿ ಕಂಠದಲಿ ಸಾರೋಣ
ನಿತ್ಯೋತ್ಸವವನು ಮಾಡೋಣ
ದೇಶದಿ ನೆತ್ತರು ಬೀಳದ ಹಾಗೆ
ವೈರಿ ಪಡೆಗಳನು ಹಣಿಯೋಣ
ಶಾಂತಿದೂತರು ನಾವೆನ್ನುತಲಿ
ವಿಶ್ವ ಪ್ರೇಮವ ಪಡೆಯೋಣ
ನಿತ್ಯೋತ್ಸವವನು ಮಾಡೋಣ
ಸಾಹಿತ್ಯ ಮತ್ತು ಸಂಗೀತ:
ಉಪಾಸನಾ ಮೋಹನ್
ಗಾಯನ: ಪಂಚಮ್ ಹಳಿಬಂಡಿ, ಉಪಾಸನಾ ಮೊಹನ್,
ಮೇಘನಾ ಭಟ್, ಚಿನ್ಮಯಿ ಚಂದ್ರಶೇಖರ್
Негізгі бет Deshave modalu ennona | Patriotic Song | New kannada patriotic Song | upasana mohan | ದೇಶವೆ ಮೊದಲು
Пікірлер: 48