Dharwad Today
ಧಾರವಾಡ:
ವಿದ್ಯಾಕಾಶಿ ಧಾರವಾಡ ಪ್ರತಿಭೆಗಳ ಖಣಜವೇ ಹೌದು. ಇಲ್ಲಿನ ಕವಿ, ಸಾಹಿತಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದರೆ ಇದೀಗ ಸಿನಿಮಾ ರಂಗದಲ್ಲೂ ಧಾರವಾಡದ ಹೈದನೊಬ್ಬ ಹೆಸರು ಮಾಡುತ್ತಿದ್ದಾನೆ. ಅದರಲ್ಲೂ ಬಾಲಿವುಡ್ನಲ್ಲಿ ಧಾರವಾಡದ ವ್ಯಕ್ತಿ ದೊಡ್ಡಮಟ್ಟದ ಸಿನಿಮಾ ಮಾಡಿ ಗಮನಸೆಳೆದಿದ್ದಾನೆ.
ಹೌದು! ಈ ಟ್ರೈಲರ್ ನೋಡಿದ್ರೆ ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರ ಎಂದು ಗೊತ್ತಾಗುತ್ತದೆ. ಹೀಗೆ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಹೀರೋ ಪಾತ್ರದ ವ್ಯಕ್ತಿ ಧಾರವಾಡದವರು. ಧಾರವಾಡದ ಮಹ್ಮದ್ ಸಲೀಂ ಮುಲ್ಲಾನವರ ಎಂಬುವವರು ಇದೀಗ ಬಾಲಿವುಡ್ನಲ್ಲಿ 'ಢಾಕ್' ಎಂಬ ಸಿನಿಮಾದಲ್ಲಿ ನಾಯಕ ನಟನ ಪಾತ್ರದಲ್ಲಿ ಖದರ್ ಲುಕ್ನಲ್ಲಿ ಮಿಂಚಿದ್ದಾರೆ.
ಚಿತ್ರರಂಗದಲ್ಲಿ ಆಸಕ್ತಿ ಹೊಂದಿದ್ದ ಮಹ್ಮದ್ ಸಲೀಂ ಮೊದಲು 'ಛೋಟಾ ಮುಂಬೈ' ಎಂಬ ಕನ್ನಡ ಸಿನಿಮಾದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಮಿಂಚಿದ್ದರು. ಇದೀಗ ನೇರವಾಗಿ ಬಾಲಿವುಡ್ಗೆ ಎಂಟ್ರಿ ಕೊಟ್ಟಿರುವ ಇವರು ನಾಯಕನ ಪಾತ್ರದಲ್ಲಿ ಮಿಂಚಿದ್ದಾರೆ. 'ಢಾಕ್' ಎಂಬ ಸಿನಿಮಾವನ್ನು ಸೆ.20 ರಂದು ದೇಶದಾದ್ಯಂತ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಈ ಚಿತ್ರವನ್ನು ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ. ನಟ ಯಶ್ ಅವರ ಜೊತೆ ರಾಜಧಾನಿ ಸಿನಿಮಾದಲ್ಲಿ ಸಹ ನಟಿಯಾಗಿ ನಟಿಸಿದ್ದ ಸೀನಾ ಶಬಾದಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮಹ್ಮದ್ ಸಲೀಂ ಮುಲ್ಲಾನವರ ಅವರೇ ಚಿತ್ರವನ್ನು ನಿರ್ಮಿಸಿ ನಟಿಸಿದ್ದು, ಅನೀಶ್ ಬಾರುದ್ವಾಲೆ ನಿರ್ದೇಶಿಸಿದ್ದಾರೆ. ಗಜನಿ ಖ್ಯಾತಿಯ ವಿಲನ್ ಪ್ರದೀಪ್ ಸಿಂಗ್ ರಾವತ್ ಸೇರಿದಂತೆ ಬಾಲಿವುಡ್ನ ಅನೇಕ ಹಿರಿಯ ನಟರು ಈ ಚಿತ್ರದಲ್ಲಿದ್ದಾರೆ. ಸುನೀಲ್ ಸಿಂಗ್ ಕಲಾ ನಿರ್ದೇಶನ, ನಿಸಾರ್ ಅಕ್ತರ್ ಸಂಭಾಷಣೆ, ಮುಖೇಶ್ ಶರ್ಮಾ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಇದೊಂದು ಕುಟುಂಬ ಪ್ರಧಾನ ಪ್ರೇಮಕಥೆ ಇರುವ ಚಿತ್ರವಾಗಿದೆ.
ಒಟ್ಟಾರೆ ಧಾರವಾಡದ ಹೈದನೋರ್ವ ಇದೀಗ ಬಾಲಿವುಡ್ನಲ್ಲಿ ಮಿಂಚಲು ರೆಡಿಯಾಗಿದ್ದು, ಈ ಚಿತ್ರಕ್ಕೆ ಧಾರವಾಡ ಸೇರಿದಂತೆ ಕರ್ನಾಟಕದ ಎಲ್ಲ ಸಿನಿಪ್ರಿಯರು ಬೆಂಬಲ ಸೂಚಿಸಲೇಬೇಕಿದೆ. ಒಂದು ವೇಳೆ ಈ ಚಿತ್ರ ಗೆದ್ದಿದ್ದೇ ಆದಲ್ಲಿ ಧಾರವಾಡದ ಹಿರಿಮೆ ಕೂಡ ಹೆಚ್ಚಾಗಲಿದೆ.
Негізгі бет ಧಾರವಾಡದ ಹೂಸ ಪ್ರತಿಬೆ ಬಾಲಿವುಡ್ಗೆ ಎಂಟ್ರಿ: ಖಡಕ್ ಲುಕ್ನಲ್ಲಿ ಮಿಂಚಿದ ಮಹ್ಮದ್ ಸಲೀಂ*
Пікірлер: 5