ಡಾ. ಗುರುರಾಜ್ ಕರ್ಜಗಿ - ಅಧ್ಯಕ್ಷರು - ಅಕಾಡೆಮಿ ಆಫ್ ಕ್ರಿಯೇಟಿವ್ ಟೀಚಿಂಗ್ (ಆಕ್ಟ್)
ಡಾ. ಕರ್ಜಗಿ ತಮ್ಮ ಬಾಲ್ಯದ ದಿನಗಳನ್ನ ನೆನಪು ಮಾಡ್ಕೊಳ್ತಾ ಮೇಷ್ಟ್ರಾಗಿದ್ದ ಅವರ ಅಜ್ಜನ ಬಗ್ಗೆ ಮಾತಾಡ್ತಾರೆ. ಹಿಂದೆ ನಡೆದ ೨ ಘಟನೆಯನ್ನ ಮೆಲಕು ಹಾಕ್ತಾ ಅವರು ತಮ್ಮ ಅಜ್ಜ ಹಾಗು ಅಕ್ಕನಿಂದ ಸಾಕಷ್ಟು ಪ್ರಭಾವಿತಾಗಿದ್ದರ ಬಗ್ಗೆ ಹಾಗು ಅವರಿಂದ ಒಬ್ಬ ಮಾದರಿ ಶಿಕ್ಷಕರಾಗೋ ಬಗ್ಗೆ ಕಲಿತ ಮೌಲ್ಯಗಳನ್ನ ಹಂಚ್ಕೋತಾರೆ. ಡಾ. ಕರ್ಜಗಿ ೫೦ ವರ್ಷಗಳ ಹಿಂದೆ ಅಂದ್ರೆ ೧೯೭೨ ರಲ್ಲಿ ತಮ್ಮ ಶಿಕ್ಷಕ ವೃತಿಯನ್ನ ಪ್ರಾರಂಭಿಸಿದೊರು . ತಮ್ಮ ಅಜ್ಜನಿಂದ ಕಲಿತ ಎಷ್ಟೋ ಪಾಠಗಳಲ್ಲಿ "ಬದುಕಿದರೆ ಜೇನುನೊಣದ ಹಾಗೆ ಬದುಕು" ಎಂಬ ಮಾತನ್ನ ನೆನಪು ಮಾಡ್ಕೊಳ್ತಾ ಹೇಳ್ತಾರೆ - "ಪ್ರಪಂಚದಲ್ಲಿ ಸಾಕಷ್ಟು ಒಳ್ಳೆಯ ಹಾಗು ಕೆಟ್ಟ ವಿಚಾರಗಳು ಉಂಟು. ಅದರ ಆಯ್ಕೆ ನಮ್ಮ ಕೈಯಲ್ಲಿ. ಹೇಗೆ ಜೇನುನೊಣ ತಿರುಗಿ ತಿರುಗಿ ಅಂದವಾಗಿ ಅರಳಿರೋ ಹೂವನ್ನ ಹುಡುಕಿ ಹೋಗಿ ಒಂದು ಹನಿ ಜೆನನ್ನ ತನ್ನ ಹಾಗು ಇತರರ ಉಪಯೋಗಕ್ಕಾಗಿ ತೆಗೆದುಕೊಳ್ಳುತ್ತೊ ಹಾಗೆ ಒಂದು ಸಾಮಾನ್ಯ ನೊಣ ಸತ್ತ ಎಮ್ಮೆ ಹತ್ರ ಹೋಗುತ್ತೆ. ಇಂಥಾ ಎಷ್ಟೋ ಆಯ್ಕೆಗಳು ದಿನ ನಿತ್ಯ ನಮಗೆ ಎದುರಾಗ್ತವೆ. ಈ ಎರಡು ಆಯ್ಕೆಗಳ ನಡುವೆ ಯಾವುದು ನಮಗೆ ಒಳ್ಳೇದು ಅನ್ನೋರಿಗೆ ನಾವೇ ನಿರ್ಧರಿಸಬೇಕು" ಅಂತ ಹೇಳ್ತಾರೆ.
ಡಾ. ಕರ್ಜಗಿ ಅವರು ಶಿಕ್ಷಕರಾಗಬೇಕು ಅನೋರಿಗೆ ಒಂದು ಕಿವಿ ಮಾತನ್ನ ಹೇಳ್ತ - "ಶಿಕ್ಷಕನಾಗ್ಬೇಕು ಅಂದ್ರೆ ಬದುಕು ಸುಂದರವಾಗಿದೆ ಅನ್ನೋ ಸಕಾರಾತ್ಮಕ ದೃಷ್ಟಿಕೋನವನ್ನ ಅಳವಡಿಸ್ಕೊಳ್ಳಿ. ಪ್ರತಿ ಮಗುವಿನಲ್ಲೂ ಅವನಿಗೆ ಬದುಕಲು ಅತ್ವ ಬದುಕು ಕಟ್ಟಿಕೊಳ್ಳಲು ಬೇಕಾದ ಸಾಮರ್ಥ್ಯ ಹಾಗು ಪ್ರತಿಭೆ ಇರುತ್ತೆ. ಒಬ್ಬ ಒಳ್ಳೆ ಶಿಕ್ಷಕ ಬೇಕಾದ ಸಮಯದಲ್ಲಿ ಬೇಕಾದ ಮಾರ್ಗದರ್ಶನವನ್ನ ಆತನಿಗೆ ಪ್ರೀತಿಯಿಂದ ನೀಡಬೇಕು ಅಷ್ಟೇ."
Dr.Gururaj Karajagi - Chairman | Academy of Creative Teaching (ACT)
Dr.Karajagi fondly recalls memory from his childhood, where he grew up seeing his grandfather who was a teacher himself. He narrates two incidences from the past- one with his grandfather and the other with his sister who had a huge impact on his life and were his inspiration to be a teacher. Dr.Karajagi started his career as a teacher in the year 1972 and has stepped into his 50th year of teaching and is more grateful for all the learning opportunities he grabbed from his students. He recalls one of the many learnings he got from his grandfather. That is “To live like a bee”. He says off every other distractions/disturbances a bee ponders to find a beautifully bloomed flower and picks a drop of honey for itself and the best benefit of others. But on the other hand, a housefly ends up breeding on a dead buffalo. Likewise, we all have choices to make. In a world full of both positives and negatives be mindful about what you choose and live like a bee says Dr.Karajagi.
He wraps up with an advise “To be trainer one should commit to staying positive. Every child has all the talent/knowledge he’ll ever need. A teacher/trainer’s job is to help them navigate through obstacles”.
Негізгі бет ಡಾ.ಗುರುರಾಜ್ ಕರ್ಜಗಿ, ಒಳ್ಳೆ ಶಿಕ್ಷಕ ಬೇಕಾದ ಸಮಯದಲ್ಲಿ ಬೇಕಾದ ಮಾರ್ಗದರ್ಶನವನ್ನ ಆತನಿಗೆ ಪ್ರೀತಿಯಿಂದ ನೀಡಬೇಕು ಅಷ್ಟೇ
Пікірлер: 142