ಹಬ್ಬಲಿ ಅವರ ರಸಬಳ್ಳಿ ತ್ರಿಪದಿ | 2nd PUC Poem | Kannada Janapada song | janapada songs
#janapada #janapada_geethegalu #folk #janapada_geete #folkdjsongs #djfolksong #kannadapoems #Tripadi #HabbaliAvaraRasaballi #uttarakarnataka #uttarakarnatakajanapadasong #sobanepadagalu
Song Credit
Song Title - ಹಬ್ಬಲಿ ಅವರ ರಸ
Singer - Shobha Sagar
lyrics - 2nd PUC poem janapada tripadi
ಇಷ್ಟು ಚೆಂದದ ಜನಪದ ಗೀತೆ ಹಾಡಲು ಸಲಹೆ ನೀಡಿದ ಹೆಬಸೂರ ರಂಜಾನ್ ಸರ್ ಗೆ ಧನ್ಯವಾದಗಳು 🙏
ನಮ್ಮ ಜನಪದ ನಮ್ಮ ಹೆಮ್ಮೆ 👍
ನೋಡಿ ಮತ್ತು ಹಂಚಿಕೊಳ್ಳಿ 🙏
Lyrics
ಹಬ್ಬಲಿ ಅವರ ರಸಬಳ್ಳಿ
ಬಂಗಾರ ಬಳೆಯಿಟ್ಟು ಬೈಬ್ಯಾಡ ಬಡವರನ|
ಬಂಗಾರ ನಿನಗ ಸ್ಥಿರವಲ್ಲ| ಮಧ್ಯಾನದ|
ಬಿಸಿಲು ಹೊಳ್ಳೋದು ತಡವಲ್ಲ||
ಬಡತನ ಬಂದರ ಬಡಿಬ್ಯಾಡ ಬಾಲರನ|
ಆಡ್ಯಾಡಿ ಬಂದು ತೊಡಿಮ್ಯಾಲ| ಆಡಿದರ|
ಬಡತನವೆಲ್ಲ ಬಯಲಾಗೆ||
ಉತ್ತಮರ ಗೆಳೆತನ ಪುತ್ಥಳಿ ಬಂಗಾರ|
ಮತ್ತಹೀನರ ಗೆಳೆತನ| ಮಾಡಿದರ|
ಹಿತ್ತಾಳೆಗಿಂತ ಬಲುಹೀನ||
ಮಂದಿಮಕ್ಕಳೊಳಗ ಛಂದಾಗೊಂದಿರಬೇಕ|
ನಂದೀಯ ಶಿವನ ದಯದಿಂದ| ಹೋಗಾಗ|
ಮಂದಿ ಬಾಯಾಗ ಇರಬೇಕ||
ಇದ್ದರ ಇರಬೇಕು ಬುದ್ದಿವಂತರ ನೆರೆಯ|
ಖುದ್ದರಗೇಡಿ ಕುಲಗೇಡಿ| ನೆರೆಯಿದ್ದು|
ಇದ್ದುಟ್ಟು ಬುದ್ದಿ ಕಳಕೊಂಡ||
ಹುಟ್ಟುವಾಗ ತರಲಿಲ್ಲ ಹೋಗುವಾಗೊಯ್ಯಲಾರೆ|
ಸುಟ್ಟು ಸುಟ್ಟು ಸುಣ್ಣದ್ದರಳಾಯ್ತು| ದೇಹವು|
ಕಷ್ಟವನು ಬಿಡಿಸೊ ಸೃಷ್ಟಿಗೊಡೆಯ||
ಬ್ಯಾಸಗಿ ದಿವಸಕ ಬೇವಿನ ಮರ ತಂಪ|
ಭೀಮರತಿಯೆಂಬ ಹೊಳಿ ತಂಪು| ಹಡೆದಮ್ಮ|
ನೀ ತಂಪ ನನ್ನ ತವರೀಗಿ||
ಕಣ್ಣೆಂಜಲ ಕಾಡೀಗಿ ಬಾಯೆಂಜಲವೀಳ್ಯಾವ|
ಯಾರೆಂಜಲುಂಡು ನನಮನವ| ಹಡೆದೌವ್ವ|
ಬಾಯೆಂಜಲುಂಡು ಬೆಳೆದೇನ||
ಯಾರು ಇದ್ದರು ನನ್ನ ತಾಯವ್ವನ್ಹೋಲರ|
ಸಾವಿರಕೊಳ್ಳಿ ಒಲಿಯಾಗ| ಇದ್ದರ|
ಜ್ಯೋತಿ ನಿನ್ನಾರ ಹೋಲರ||
ಹೆಣ್ಣು ಮಕ್ಕಳ ದುಃಖ ಹೆತ್ತವ್ವ ಬಲ್ಲಳು|
ಹುತ್ತದ ಒಳಗಿರೋ ಸರುಪನ| ಬೇಗೆಯ|
ನೆತ್ತಿ ಮೇಲಿರುವ ಶಿವಬಲ್ಲ||
ತಾಯೌವ್ನ ನೆನೆಯೂದು ಯಾಯಾಳಿ ಯಾಹೊತ್ತ|
ಊರೆಲ್ಲ ಉಂಡು ಮಲಗಾನ| ಬೆಳ್ಳಿಚಿಕ್ಕಿ|
ಹೊಂಡಾಗ ಹಡೆದವ್ನ ನೆನದೇನ||
ತಾಯೌವ್ನ ಬೈಬ್ಯಾಡ ತಿಳಿಗೇಡಿ ನನ ತಮ್ಮ|
ಬಾಳದಿನದಾಕಿ ಹಡೆದವ್ವನ| ಬೈದರು|
ಭಾಳ ಮರುಗ್ಯಾಳ ಮನದಾಗ||
ತಾಯಿಲ್ಲದ ತವರೀಗಿ ಹೋಗದಿರು ನನ ಮನವ|
ನೀರಿಲ್ಲದ ಕೆರಿಗೆ ಕರು ಬಂದು| ತಿರುಗಾಗ|
ಆಗ ನೋಡವರ ದುಃಖಗಳ||
ಉಂಗೂರ ಉಡದಾರ ಮುರಿದರ ಮಾಡಿಸಬಹುದು|
ಮಡದಿ ಸತ್ತರ ತರಬಹುದು| ಹಡೆದಂಥ|
ತಂದೆ ತಾಯೆಲ್ಲಿ ಸಿಕ್ಕಾರ||
ಹಾಲುಂಡ ತವರೀಗಿ ಏನೆಂದು ಹರಸಲಿ|
ಹೊಳೆದಂಡಿಲಿರುವ ಕರಕೀಯ| ಕುಡಿಯಂಗ|
ಹಬ್ಬಲಿ ಅವರ ರಸಬಳ್ಳಿ||
Негізгі бет Музыка Habbali Avara Rasaballi 2nd puc | ಹಬ್ಬಲಿ ಅವರ ರಸಬಳ್ಳಿ | Janapada Songs Kannada | ಗರತಿಯ ಹಾಡುಗಳು
Пікірлер: 173