ಹಾಡಿದವರು_ಶಿಲ್ಪಾ ಪ್ರಶಾಂತ ಹೆಗಡೆ ಅಂಬ್ಲಿಹೊಂಡ
ಹಾಡಿನ ಸಾಹಿತ್ಯ 👇👇
ಮನೆತುಂಬು ಬಾ ಮಗಳೆ ಮನತುಂಬ ಬಾ||
ನಿನಗಾಗಿ ಕಾದಿಹುದು ನಿಲಯವಿದು ನೀ ಬಾss||ಪ||
ಶುದ್ಧ ಮನದಿಂದ ಕುಲದೇವರನು ನೆನೆಯುತ ಬಾ||
ಮನೆಗೌರವದ ಜ್ಯೋತಿ ಬೆಳಗಿಸಲು ನೀ ಬಾss||1||
ಹೆತ್ತವರ ಪ್ರೀತಿಯನು ಅತ್ತೆಯಲಿ ಕಾಣಲು ಬಾ||
ಹಿರಿಯಕಿರಿಯರ ಜೊತೆಗೆ ಸೇರಿರಲು ನೀ ಬಾ||2||
ಬಂಧುಬಾಂಧವರೊಡನೆ ಮಮತೆಯಿಂದಲಿ ಇರುತ||
ಆಗಮಿಪ ಅತಿಥಿಗಳ ಸ್ವಾಗತಿಸುತಾ ಬಾ|
ನಿತ್ಯಕರ್ಮಾದಿಗಳ ತಪ್ಪದಲೆ ಪಾಲಿಸುತ|
ಆಯುರಾರೋಗ್ಯವನು ದೇವರಲಿ ಪ್ರಾರ್ಥಿಸುತ||3||
ಶುಭಮೂರ್ತದಲಿ ಇಂದು ಗೃಹಸೇರುತಿರುವೆ||
ನಗುನಗುತ ಬಾಳೆಂದು ಶುಭಕೋರುತಿರುವೆ|
ಸಕಲ(ಅಷ್ಟ) ಐಶ್ವರ್ಯಗಳ ಸೌಭಾಗ್ಯದಾ ಸಿರಿಯು ನಿನ್ನಿಂದ ಬರಲೆಂದು ಹಾರೈಸುತಿರುವೆ||4||
Негізгі бет Havyaka haadu_Mane tumbu baa magale ಹವ್ಯಕ ಹಾಡು_ಮನೆತುಂಬು ಬಾ ಮಗಳೆ
Пікірлер: 28