ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಸಾಹಿತ್ಯ - ಪೂರ್ಣಿಮಾ ಉಡುಪ
ಸಂಗೀತ - ಗಾಯನ ಗುರುದತ್ತ ಸೌಕೂರು
ನನ್ನ ಹೃದಯದ ಮಿಡಿತ ಕನ್ನಡ
ಕಣ್ಣ ಹೊಳಪಲ್ಲಿಹುದು ನೋಡ
ಮಣ್ಣ ಮಹಿಮೆಯು ಆದೆಂಥ ಗಾಢ
ಬಣ್ಣಿಸಲಿ ಹೇಗದರ ಸೊಗಡ ...
ಹರಿವ ಝುಳುಝುಳು ನೀರಿನಲ್ಲಿ
ಬಿರಿದ ಜಾಜಿಯ ಕಂಪಿನಲ್ಲಿ
ಕರುವ ಕೊರಳಿನ ಗೆಜ್ಜೆಯಲ್ಲಿ
ಬರುವ ಸ್ವರ ಕನ್ನಡವೇ ಇಲ್ಲಿ
ಕಬ್ಬಿಗರ ರಸಕಾವ್ಯಗಳಲಿ
ಹಬ್ಬದೂಟದ ಭಕ್ಷ್ಯಗಳಲಿ
ಗುಬ್ಬಿಗಳ ಚಿಲಿಪಿಲಿಯ ದನಿಯಲಿ
ಹಬ್ಬಿ ಬರುತಿದೆ ಕನ್ನಡವಿಲ್ಲಿ
ಭಾಷೆಯಾ ಅಭಿಮಾನ ನಮ್ಮದು
ದೇಶ - ದೇಶಕು ಹರಡಬೇಕಿದು
ದ್ವೇಷ ತೋರದೇ ಉಳಿಸಬೇಕಿದು
ಕ್ಲೇಷವಾದರೂ ಸಾಧ್ಯವಹುದಿದು
Негізгі бет "ಹೃದಯದ ಮಿಡಿತ ಕನ್ನಡ" - Karaoke
Пікірлер