ದಿನಾಂಕ :21/06/2024 ರಂದು ಮೈಸೂರಿನ ವಿಜಯನಗರದಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎ. ಶಂಕರಚೆಟ್ಟಿ & ಸನ್ಸ್ ನಿರ್ದೇಶಕರಾದ ಶ್ರೀಮತಿ ಪಲ್ಲವಿ ಆದರ್ಶ್ ರವರು ಆಗಮಿಸಿದ್ದರು. ಮೊದಲಿಗೆ ಶಾಲೆಯ 203 ವಿದ್ಯಾರ್ಥಿಗಳಿಂದ ಅನಾವರಣಗೊಂಡ ಯೋಗವ್ಯೂಹ ರಚನಾ ಪ್ರದರ್ಶನವನ್ನು ಕಣ್ತುಂಬಿಕೊಂಡ ಪೋಷಕರು ಹಾಗೂ ಗಣ್ಯರು ಮೆಚ್ಚುಗೆಯಿಂದ ತಲೆದೂಗಿದರು. ತದನಂತರ ದೀಪ ಪ್ರಜ್ವಲನೆ ಹಾಗೂ ಶಾಲಾ ಪ್ರಾರ್ಥನೆಯೊಂದಿಗೆ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ವರ್ಷದ ಧ್ಯೇಯ ವಾಕ್ಯವಾದ ಮಹಿಳಾ ಸಬಲೀಕರಣ ಎಂಬ ಪರಿಕಲ್ಪನೆಯ ಆಶಯದಂತೆ, ವಿದ್ಯಾರ್ಥಿಗಳೊಂದಿಗೆ ಮಹಿಳಾ ಪೋಷಕರು ಕೂಡಾ ಯೋಗ ಮಾಡುವ ಮೂಲಕ ಉತ್ಸಾಹದಿಂದ ಯೋಗ ದಿನದ ಆಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಆಯ್ದ ವಿದ್ಯಾರ್ಥಿ - ವಿದ್ಯಾರ್ಥಿನಿಯರ ಪ್ರತ್ಯೇಕ ತಂಡಗಳು ನೀಡಿದ ಯೋಗ ಪಿರಾಮಿಡ್ ಪ್ರದರ್ಶನವು ಮನಮೋಹಕವಾಗಿತ್ತು.
Негізгі бет International Yoga Day 2024
Пікірлер