ನಮ್ಮ ಕೃಷಿ ಬದುಕಿನೊಂದಿಗೆ ಬೆಳೆದು ಬಂದ ಗ್ರಾಮೀಣ ಹಬ್ಬ-ಹರಿದಿನಗಳಲ್ಲಿ ಪ್ರಮುಖವಾಗಿ ನಮ್ಮ ರೈತರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಣ್ಣು ಹಬ್ಬಗಳು ಐದು ಎರಡನೇ ಮಣ್ಣು ಹಬ್ಬ ಗುಳ್ಳವ್ವನ ಹಬ್ಬ ಈ ಗುಳ್ಳವನ ಹಬ್ಬವನ್ನು ಪ್ರತಿ ಸೋಮವಾರ ಇಲ್ಲವೇ ಮಂಗಳವಾರ ದಿನ ಅನ್ನ ದೇವತೆ ಹಾಗೂ ಮಣ್ಣು ಪೂಜಿಸಬೇಕೆಂಬ ಉದ್ದೇಶದಿಂದ ನಮ್ಮ ರೈತರು ಈ ಗುಳ್ಳವನ ಹಬ್ಬವನ್ನು ಆಚರಿಸುತ್ತಾರೆ. ಹಿಂದಿನ ದಿನಹೊಲ ಗದ್ದೆಗೆ ಹೋಗಿ ಮಣ್ಣು ತಂದು ಕಲಿಸಿ ಒಂದೇತ್ತರ ಎರಡೆತ್ತರ, ಮೂರೇತ್ತರ ಕೊನೆಗೆ ನಾಲ್ಕೇತ್ತರ ಗುಳ್ಳವ್ವನನ್ನು ಈ ಚಿತ್ರದ ಹಾಗೆ ಇಟ್ಟು ಶೃಂಗಾರ ಮಾಡಿ ಎಲ್ಲ ಹೆಣ್ಣು ಮಕ್ಕಳು ಗಂಡುಮಕ್ಕಳು ಪೂಜಿಸಿಹಾಡು ಹೇಳಿ ತರತರದ ಅಡುಗೆ ಯಡಿ ಹಿಡಿದು ಊಟ ಮಾಡಿ ನಕ್ಕು ನಲಿಯುವ ಹಬ್ಬವೇ ಗುಳ್ಳವ್ವನ ಹಬ್ಬ ಈ ಹಬ್ಬದ ಬಗ್ಗೆ ಇಂದಿನ ಪೀಳಿಗೆಯವರಿಗೆ ಗೊತ್ತಿಲ್ಲ ಹಿಂದಿನ ಪೀಳಿಗೆಯವರಿಗೆ ಗೊತ್ತಿದೆ ಇಂದಿನ ಪೀಳಿಗೆಯವರಿಗೆ ನೆನಪಿಸುವ ಹೊಸ ಪೀಳಿಗೆಯವರಿಗೆ ಹೀಗಿದೆ ಎಂದು ತಿಳಿಸುವದ ಕ್ಕಾಗಿ ಇದೊಂದು ಸಣ್ಣ ಪ್ರಯತ್ನ
Негізгі бет #ಜಾನಪದ
Пікірлер: 5