Kannada Bhaashe
Lyrics: Upasana Mohan
Music: Upasana Mohan
Audio Lable: Upasana Trust
ಕನ್ನಡ ಭಾಷೆ ಹೃದಯದ ಭಾಷೆ
ಅಮ್ಮ ಹಚ್ಚಿದ ಹಣತೆ
ಕನ್ನಡದೊಲವಿನ ಕವಿಗಳು ಕಟ್ಟಿದ
ಪ್ರೀತಿಯ ಮಮತೆಯ ಕವಿತೆ
ತಾಯ ಶಿರದಿ ಪ್ರಭಾವಳಿ ಹರಡಿದೆ
ಜ್ಞಾನಪೀಠದ ಘನತೆ
ಅರಿಸಿನ ಕುಂಕುಮ ಧ್ವಜವೇ ಆಗಿದೆ
ಕನ್ನಡ ನಾಡಿಗೆ ಮಾನ್ಯತೆ
ಜಾತಿ ಭೇದವೇ ಇರದ ನೆಲದಿ
ತುಂಬಿದೆ ನವಭಾವೈಕ್ಯತೆ
ಕನ್ನಡ ತಾಯಿಯ ತುತ್ತಲಿ ಅಡಗಿದೆ
ಅಮೃತ ಶಕ್ತಿಯ ಮಮತೆ
ಎಲ್ಲರ ಎದೆಗೆ ನಿರಂತರ ಹರಿಯಲಿ
ಮಧುರ ಸವಿಯ ಸರಿತೆ
ಬೆಳಗಲಿ ಮೊಳಗಲಿ ಕನ್ನಡ ಗೀತೆ
ಮೆರೆಯಲಿ ಕನ್ನಡ ಘನತೆ
ರಚನೆ: ಉಪಾಸನಾ ಮೋಹನ್
ಸಂಗೀತ: ಉಪಾಸನಾ ಮೋಹನ್
Негізгі бет Музыка Kannada Bhaashe | Group | Upasana Mohan | Upasana Mohan | Bhavageethe
Пікірлер: 28