"ಶ್ರೀ #ಕೋಡುಗಲ್ಲು ಪುಣ್ಯಕ್ಷೇತ್ರ"
ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಪವಿತ್ರ ಎಪ್ಪತ್ತೇಳು ಮಲೆ ಒಡೆಯನ ಪವಾಡ ಪುಣ್ಯಕ್ಷೇತ್ರ ಶ್ರೀ ಕೊಡುಗಲ್ಲು ಮಾದಪ್ಪನ ಸನ್ನಿಧಿಯಲ್ಲಿ ಬೇಡಗಂಪಣ ಅರ್ಚಕರಿಂದ ಸಂಪ್ರದಾಯಿಕವಾಗಿ #ವಿಶೇಷ ಅಭಿಶೇಕ ಸೇವೆಯು ಮಾದಪ್ಪನ ಭಕ್ತರಿಂದ ಜರುಗಿತು.
ಈ ಕೊಡುಗಲ್ಲು ಮಾದಪ್ಪನ ಪರಮ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದ ಕಾಡೋಲ ಗ್ರಾಮದ ಉತ್ತರ ದಿಕ್ಕಿನ ಬೆಟ್ಟದಲ್ಲಿ ಇದ್ದು ಸಾಲೂರು #ಮಠದಿಂದ ಸುಮಾರು 2 ಕಿ.ಮಿ ದೂರದಲ್ಲಿದೆ.
ಈ ಪುಣ್ಯಕ್ಷೇತ್ರದಲ್ಲಿ #ಪವಾಡಗಳನ್ನು ಮಾಡಿರುವ ಮಾದಪ್ಪ ಸ್ವಾಮಿಯನ್ನು ಕೊಡುಗಲ್ಲ ದೇವಾ ಮದೇವ, ಕೊಡುಗಲ್ಲ ಮುನಿಯೇ ಮಹಾದೇವ, ಕೊರಣ್ಯ ನೀಡಮ್ಮ ಕೊಡುಗಲ್ಲು ಮದೇವನಿಗೆ ಎಂಬತ್ತೆ ಮಾದಪ್ಪ ಭಕ್ತರು ನಾನ ಹೆಸರುಗಳಿಂದ ಮನದಲ್ಲಿ ನೆನೆಯುತ್ತಾ ಭಕ್ತಿಯಿಂದ ಹಾಡಿ ಪೂಜಿಸುವರು.
ಈ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಸ್ವಾಮಿಯ #ದೇವಾಲಯ ದಿಂದ ಸುಮಾರು 3 ರಿಂದ 5 ಕಿ.ಮಿ.ದೂರದ ಬೆಟ್ಟದಲ್ಲಿ ಇದೆ.
ಮಾದಪ್ಪನ ಭಕ್ತ ಕೋಟಿಯ ದರ್ಶನಕ್ಕೆ,
ಮುದ್ದು ಮಾದಪ್ಪ ಪವಾಡ ನೆಡೆಸಿದ ದ್ಯಾನ ಮಾಡಿದ ಸ್ಥಳಗಳಲ್ಲಿ ಉಳಿದ ಕುರುಹುಗಳು ಪ್ರಸ್ತುತ ಪೂಜಾ ಸ್ಥಳಗಳಾಗಿ ಬದಲಾಗಿವೆ. ಪ್ರತಿ ನಿತ್ಯ ಸಾವಿರಾರು ಭಕ್ತರು ಪವಾಡ ನೆಡೆದ ಈ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿತ್ತಿದ್ದಾರೆ.
ಈ ಕೋಡುಗಲ್ಲು ಮಲೆಯ ಮಾಯ್ಕಾರ ಮಾದಪ್ಪನ ಎಪ್ಪತ್ತೇಳು ಮಲೆಗಳಲ್ಲಿ ಒಂದಾಗಿದೆ. ಮಹಾ ಮಹಿಮ ಮಾದಪ್ಪ ದ್ಯಾನ ಮಗ್ನರಾಗಿ ಯೋಗದಲ್ಲಿ ಕುಳಿತಿರುವಾಗ
ನೀಲಯ್ಯ ತನ್ನ ಹೆಂಡತಿಯಾದ ಶಿವ ಶರಣೆ ಸಂಕಮ್ಮನನ್ನು ವಾಮಚಾರ,ಮಾಟ ಮಂತ್ರಗಳಿಂದ ಬಂದಿಸಿ ಸುಮಾರು ಆರು ತಿಂಗಳು ಹೆಜ್ಜೇನು ಭೇಟೆಗೆ ಹೋಗಿರುತ್ತಾನೆ.
ಇತ್ತ ಶಿವ ಶರಣೆ ಶಂಕಮ್ಮ ಈ ದುಷ್ಟ ಶಕ್ತಿಯ ಬಂದನದಿಂದ ಮುಕ್ತಿ ಪಡೆಯಲು ತನ್ನ ತವರು ಮನೆಯ ಮನೆಯ ದೇವರಾದ ಮಾಯ್ಕಾರ ಮಾದಪ್ಪನನ್ನು ನೆನೆಯುತ್ತಾಳೆ.
ಇದನ್ನು ಹರಿತ ಮಹಾದೇವ ಮಾಯ್ಕಾರ ಮಾದಪ್ಪ ದ್ಯಾನದ ಯೋಗ ನಿದ್ರೆಯಿಂದ ಎದ್ದು ಈ ಪುಣ್ಯಕ್ಷೇತ್ರ ದಿಂದ ಹೋರಟು ಜೋಳಿಗೆ, ಬೇತ ಹಾಗೂ ಕಂಸಾಳೆಯ ಜೋತೆಗೆ ಕೆಂಬರಗ ಹುಲಿಯನ್ನು ಹೆರಿ "ಕೋರಣ್ಯ ನೀಡಮ್ಮ ಕೋಡುಗಲ್ಲ ಮಾದೇವನಿಗೆ" ಎಂದು ಭಿಕ್ಷವನ್ನು ಕೇಳುತ್ತಾರೆ.
ಆಗ ಬಂದನದಲ್ಲಿದ ಸಂಕಮ್ಮ ನಿನಗೆ ಹೇಗೆ ಭಿಕ್ಷ ನೀಡಲಿ ನನ್ನಪ್ಪನ ಮನೆ ದೇವರೇ ಎನ್ನುತ್ತಾ ನೂಂದ ಮನದಲ್ಲಿ ನೆನೆಯುತ್ತಾಳೆ. ತಕ್ಷಣ ಮಾದಪ್ಪ ಮಾರಿ ಮಸಣಿಯರ ರಿಂದ ಹಾಕಿದ ಸಂಕಮ್ಮನ ಸಂಕೋಲೆಯನ್ನು ಬಿಡುಗಡೆ ಮಾಡುತ್ತಾರೆ
ಈ ಪ್ರಸಂಗ ನೆಡೆಯುವ ಮುನ್ನ ಮಹದೇಶ್ವರರು ದ್ಯಾನ ಮಾಡುತ್ತಿದ್ದ ಸ್ಥಳವೇ ಕೋಡುಗಲ್ಲು ಪುಣ್ಯಕ್ಷೇತ್ರವಾಗಿದೆ.
ಮಲೆ ಮಹದೇಶ್ವರ ಸ್ವಾಮಿಯ ದೇವಾಲಯದಿಂದ ಉತ್ತರ ದಿಕ್ಕಿನಲ್ಲಿ ಬರುವ ಸಾಲೂರು ಮಠದ ರಸ್ತೆಯಲ್ಲಿ 5km ದೂರವನ್ನು ಕ್ರಮಿಸಿದರೆ ಕೋಡುಗಲ್ಲು ಬೆಟ್ಟದ ಮೇಲೆ ಇದೆ ಮಹದೇಶ್ವರ ಸ್ವಾಮಿಯ ಈ ಪುಣ್ಯಕ್ಷೇತ್ರ.
ಪ್ರಸ್ತುತ ಈ ಪವಾಡ ಪುಣ್ಯಕ್ಷೇತ್ರದಲ್ಲಿ ಕೊಂಬುಗಳಂತೆ ಜೋಡಿ ಕಲ್ಲುಗಳ ಕೋಡುಗಲ್ಲುಗಳ ಕುರುವುಗಳು ಇವೆ.
ಒಂದರ ಮೇಲೊಂದು ಸಣ್ಣ ಕಲ್ಲುಗಳು ಗೋಪುರಾಕೃತಿಯಲ್ಲಿ ಕಾಣಸಿಗುತ್ತದೆ.
ಸುಮಾರು 800 ವರ್ಷಗಳಿಂದ ಈ ಕೋಡುಗಲ್ಲುಗಳು ವಾರೆಯಾಗಿ ಹೀಗೆಯೇ ಶತಶತಮಾನಗಳಿಂದಲೂ ಅಂದಾಜು ಸಮುದ್ರ ಮಟ್ಟಕ್ಕಿಂತ 3800 ಅಡಿ ಎತ್ತರ ಪ್ರದೇಶದಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಬೀಸುವ ಜೋರು ಗಾಳಿ ಮಳೆಯ ನಡುವೆಯೂ ಕೋಡುಗಲ್ಲು ಮಾದಪ್ಪನ ಕೋಡುಗಲ್ಲುಗಳು ಎಂದಿಗೂ ಅಲುಗಾಡಿಲ್ಲ.
ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನ ಕ್ಕೆ ಆಗಮಿಸುವ ಭಕ್ತರು ಕೋಡುಗಲ್ಲು ಪುಣ್ಯಕ್ಷೇತ್ರ ಕ್ಕೆ ಬರಿ ಕಾಲ್ನಡಿಗೆಯಲ್ಲಿ ತೆರಳಿ ಪೂಜೆಯನ್ನು ಸಲ್ಲಿಸುತ್ತಾರೆ.
ಬೇಡಗಂಪಣ ಅರ್ಚಕರ ಧಾರ್ಮಿಕ ಪದ್ದತಿಯಂತೆ ಸಂಪ್ರದಾಯಿಕವಾಗಿ ತ್ರಿಕಾಲ ಪೂಜಾ ಕಾರ್ಯಗಳನ್ನು ಮಾಡಲಾಗುತ್ತದೆ. ಅಲ್ಲಾದೇ ಸೋಮವಾರ, ಶುಕ್ರವಾರ ಹಾಗೂ ಎಣ್ಣೆ ಮಜ್ಜನ ಹಾಗೂ ಅಮವಾಸ್ಯೆಯ ಪೂಜಾ ಕಾರ್ಯದ ಸೇವೆಗಳು ಸದಕಾಲವೂ ಜರುಗುತ್ತದೆ.
ಉಘೇ..ಉಘೇ...ಉಘೇ...
ಕೋಡಗಲ್ಲು ಮುನಿ ಮಾದಪ್ಪ ಪಾದಕ್ಕೆ ಒಂದು ಸಾರಿ..
Негізгі бет Музыка ಮಾದಪ್ಪನ ಕೋಡುಗಲ್ಲು ಪುಣ್ಯಕ್ಷೇತ್ರ ದರ್ಶನ || MM hills ||Male Mahadeshwara Hills|| Kodugallu Mahadeshawa
Пікірлер: 28