ಮಾರಿಕಾಂಬಾ ದೇವಾಲಯ, ಶಿರಸಿ.
ಪವಿತ್ರ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ದೇವಾಲಯದ ಇಕ್ಕೆಲಗಳಲ್ಲಿನ ಎರಡು ಆನೆಗಳ ಮೂರ್ತಿಯು ನಿಮ್ಮನ್ನು ದೇವಾಲಯದ ಒಳಗೆ ಆಹ್ವಾನಿಸುತ್ತದೆ. ಈ ದೇವಾಲಯದ ಪ್ರವೇಶ ದ್ವಾರದಿಂದ ಹಿಡಿದು ಕೊನೆಯವರೆಗೂ ಗೋಡೆಗಳ ಮೇಲೆ ಕೆಂಪು ಬಣ್ಣದಿಂದ ಪುರಾತನ ಕಥೆಗಳನ್ನು ಬರೆಯಲಾಗಿದೆ. ಭಕ್ತರು ಈ ಪುರಾತನ ಕಥೆಗಳನ್ನು ಇಲ್ಲಿ ಓದಿ ತಿಳಿದುಕೊಳ್ಳಬಹುದು. ಇನ್ನು ನೀವು ದೇವಾಲಯದ ಒಳಗೆ ಪ್ರವೇಶಿಸುತ್ತಿದ್ದಂತೆ ದೊಡ್ಡ ಸಭಾಭವನವನ್ನು ನೋಡಬಹುದು.
ಈ ಸಭಾಭವನವನ್ನು ನೀವು ಪ್ರವೇಶಿಸುತ್ತಿದ್ದಂತೆ ನಿಮ್ಮ ಮೈನವಿರೇಳಲು ಆರಂಭಿಸುತ್ತದೆ. ಇಲ್ಲಿ ಕುಂತಿರುವವಳು ಬೇರಾರು ಅಲ್ಲ, ಆಕೆಯೇ ಇಲ್ಲಿನ ಎಂಟು ಕೈಗಳ, ಏಳಡಿ ಎತ್ತರದ, ವ್ಯಾಘ್ರನ ಮೇಲೆ ಆಸೀನಳಾದ ತಾಯಿ ಮಾರಿಕಾಂಬೆ. ಈಕೆಯನ್ನು ನೋಡುತ್ತಿದ್ದಂತೆ ಜೀವನವೇ ಧನ್ಯ ಎನ್ನುವ ಭಾವನೆ ನಿಮ್ಮಲ್ಲಿ ಮೂಡತೊಡಗುತ್ತದೆ. ಭವ್ಯವಾದ ಸಭಾಂಗಣ (ಬಹುಶಃ ಇಂತಹ ವಿಶಾಲವಾದ ಸಭಾಂಗಣಗಳು ಕರ್ನಾಟಕದಲ್ಲಿ ಅಪರೂಪ) ಮತ್ತು ವಿಸ್ತಾರವಾದ ಜಗುಲಿಗಳು ಸ್ವತಃ ಶ್ರೀ ಮಾರಿಕಾಂಬೆಯ ಹಿರಿಮೆಯನ್ನು ಸಾರುತ್ತವೆ.
ಕರ್ನಾಟಕದಲ್ಲಿ ಮಾರಮ್ಮ ದೇವಿಯರಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಶಿರಸಿಯ ಈ ಮಾರಿಕಾಂಬಾ ದೇವಿಯನ್ನು ಕರ್ನಾಟಕದ ಎಲ್ಲಾ ಮಾರಿಯಮ್ಮ ದೇವಿಯರಿಗೆ ದೊಡ್ಡಕ್ಕ ಎಂದು ಕರೆಯಲಾಗುತ್ತದೆ. ಅಂದರೆ ಕೊಲ್ಲೂರಿನ ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿಗೂ ಈಕೆಯೇ ಅಕ್ಕ. ಶಿರಸಿಯ ಮಾರಿಕಾಂಬಾ ದೇವಾಲಯವನ್ನು ಶ್ರೀ ಮಾರಿಕಾಂಬಾ ದೇವಾಲಯ, ಅಮ್ನೋರ ಗುಡಿ, ಮಾರಿಗುಡಿ, ದೊಡ್ಡಮ್ಮನ ದೇವಸ್ಥಾನ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಈಕೆಯನ್ನು ಭೇಟಿಯಾಗಿ ನಮ್ಮೆಲ್ಲಾ ಕಷ್ಟಗಳನ್ನು ಹೇಳಿಕೊಂಡು ಭಕ್ತಿಯಿಂದ ಆರಾಧಿಸಿದರೆ ಖಂಡಿತವಾಗಿ ಎಲ್ಲಾ ಕಷ್ಟಗಳನ್ನು ದೂರಾಗಿಸಿ, ಮನಸ್ಸಿಗೆ ಅದೇನೋ ಶಾಂತಿ, ನೆಮ್ಮದಿಯನ್ನು ಕರುಣಿಸುತ್ತಾಳೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ. ಶ್ರೀ ಮಾರಿಕಾಂಬಾ ದೇವಾಲಯವನ್ನು 1688 ರಲ್ಲಿ ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ.
Негізгі бет Marikamba Devalaya Sirsi
No video
Пікірлер: 9