ಮುನ್ನುಡಿ ಚಲನಚಿತ್ರದ ಹಾಡು
ಕಡಲ ತೆರೆಗಳು ಮರಳ ಹಲಗೆಯ
ಮೇಲೆ ಬರೆದಿವೆ ಮುನ್ನುಡೀ
ಒಡಲ ನೋವಿನ ಚಿತ್ರ ರೂಪಕ
ತೆರೆದ ಮನಸಿಗೆ ಕನ್ನಡೀ
ಮೂರು ತಿಂಗಳ ಗಂಡ ಹೆಂಡತಿ
ಪ್ರೀತಿ ಪ್ರೇಮವು ಸುಮ್ಮನೇ
ದಫನಗೊಂಡಿದೆ ಮದುವೆ ಬಂಧನ
ಗಂಡು ಕಟ್ಟಿದ ಸೆರೆಮನೇ
ಏಳು ಕಡಲನು ಏರಿ ಹೋದವ
ಕನಸು ಕೊಟ್ಟನು ನಲ್ಲೆಗೇ
ಮರಳಿ ಬರುವನು ಬಾಳು ಕೊಡುವನು
ಎಂಬ ಆಸೆಯು ಇವಳಿಗೇ
ಅಪ್ಪ ಬರುವನು ಕಪ್ಪ ತರುವನು
ಎಂದು ಕಾದಿಹ ಬಾಲೆಗೇ
ಸತ್ತ ಗೆಳತಿಯ ಹರಿದ ಕಫನವ
ತೊಡಿಸಿ ಹೊತ್ತರು ಮದುವೆಗೇ
ಕಡಲು ಕುದಿಯಿತು ಹಡಗು ಉರಿಯಿತು
ಕಣ್ಣು ಕೆಂಡದ ಕಾವಲೀ
ಮೌನ ಸುಟ್ಟಳು ಬೆಂಕಿ ಸುರಿದಳು
ಗಂಡು ಕಾಮದ ಗೋರಿಗೇ
Негізгі бет ಮುನ್ನುಡಿ Song 2
No video
Пікірлер: 2