ನಮ್ಮೊಳಗಿನ ಕೋಪವನ್ನು ನಿಯಂತ್ರಿಸುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ
ನಮ್ಮಲ್ಲಿರುವ ಕಾಮನೆಗಳು ಪೂರೈಸದೇ ಇರುವಾಗ ಉಂಟಾಗುವುದೇ ಕ್ರೋಧ. ಶಾರೀರಿಕ, ಮಾನಸಿಕ ಹಾಗೂ ಭೌತಿಕ ಕಾಮನೆಗಳಿಂದಲೇ ಕ್ರೋಧ ಉಂಟಾಗುವುದು. ಭೌತಿಕ ಕಾಮನೆ ಹೆಚ್ಚಿರುವುದು ಮಕ್ಕಳಲ್ಲಿ. ಆ ಮಗು ದೊಡ್ಡವನಾಗುತ್ತ ಮಾನಸಿಕ ಕಾಮನೆಗಳು ಹುಟ್ಟುತ್ತವೆ. ಮುಂದುವರೆದು ಅವನು ಬೆಳೆದಾಗ ಶಾರೀರಿಕ ಕಾಮನೆಗಳೂ ಉದ್ಭವವಾಗುತ್ತದೆ. ಇವುಗಳು ಪೂರೈಸದಿರುವಾಗಲೇ ಕ್ರೋಧ ಆರಂಭವಾಗುವುದು. ನಮ್ಮ ಕಾಮನೆಗಳಿಗೆ ತಡೆಯುಂಟಾದಾಗ ಆ ತಡೆಯುಂಟುಮಾಡಿದವರ ಮೇಲೆ ನಮಗೆ ಕೋಪ ಉಂಟಾಗುತ್ತದೆ. ನೇರವಾಗಿ ಹೇಳುವುದಾದರೆ ಒಂದು ಮನುಷ್ಯನ ಆಸೆಗಳು ಈಡೇರದಿದ್ದರೆ ಅದು ಕ್ರೋಧವಾಗಿಯೂ, ಆಸೆಗಳು ಈಡೇರಿದಾಗ ಅದು ಶಾಂತಿ ಆಗಿಯೂ ಮಾರ್ಪಡುತ್ತದೆ. ಜೀವನಕ್ಕೆ ಮುಖ್ಯ ಕಾರಣಗಳೂ ಇವುಗಳೇ ಆಗಿರುತ್ತದೆ.
Негізгі бет ನಮ್ಮೊಳಗಿನ ಕೋಪವನ್ನು ನಿಯಂತ್ರಿಸುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ
Пікірлер: 9