ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ
ರಂಗನ ಎಲ್ಲಿ ನೋಡಿದಿರಿ || ಪ ||
ಎಲ್ಲಿ ನೋಡಿದರಲ್ಲಿ ತಾನಿಲ್ಲ ದಿಲ್ಲವೆಂದು ಬಲ್ಲ ಜಾಣರೆ || ಅ.ಪ ||
ನಂದಗೋಪನ ಮಂದಿರಂಗಳ ಸಂದುಗೊಂದಿನಲಿ
ಅಂದ ಚಂದದ ಗೋಪ ಬಾಲರ ವೃಂದ ವೃಂದದಲಿ
ಸುಂದರಾಂಗದ ಸುಂದರೀಯರ ಹಿಂದು ಮುಂದಿನಲಿ
ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ || 1 ||
ಈ ಚರಾಚರದೊಳಗೆ ಅಜಾಂಡದ ಆಚೆ ಈಚೆಯಲಿ
ಖೇಚರೇಂದ್ರನ ಸುತನ ರಥದ ಚೌಕ ಪೀಠದಲಿ
ನಾಚದೆ ಮಾಧವ ಕೇಶವ ಎಂಬ ವಾಚಕಂಗಳಲಿ
ವೀಚುಕೊಂಡದ ಪುರಂದರ ವಿಠಲನ ಲೋಚನಾಗ್ರದಲಿ || 2 ||
Негізгі бет Pillangoviya Cheluva Krishnana | Vidyabhushana | Kannada Devotional song |ಪಿಳ್ಳಂಗೋವಿಯ ಚೆಲುವ ಕೃಷ್ಣನ
Пікірлер: 150