ಎಲ್ಲರಿಗೂ ನವರಾತ್ರಿಯ ಶುಭಾಶಯಗಳು🙏
ಶ್ರೀ ಇಂದಿರೇಶ ದಾಸ ಕೃತ ಶ್ರೀ ಲಕ್ಷ್ಮೀ ಲೀಲಾಮೃತ. ದಾಸರು ಲಕ್ಷ್ಮೀ ದೇವಿಯ ಲೀಲೆಗಳನ್ನು ಬಹಳ ಸುಂದರವಾಗಿ ವರ್ಣಿಸಿದ್ದಾರೆ. ಇದನ್ನು ನಿತ್ಯದಲ್ಲಿ ಪಾರಾಯಣ ಮಾಡಿದರೆ ಆ ಮಹಾಲಕ್ಷ್ಮೀ ಮಾತೆಯು ಆಯುರಾರೋಗ್ಯ ಐಶ್ವರ್ಯ ಗಳನ್ನು ಕೊಟ್ಟು ಕಾಪಾಡುತ್ತಾಳೆ. ಇದಕ್ಕೆ ಸಾಕ್ಷಿ ಎಂದರೆ ನನಗೆ ಬಹಳ ಬೇಕಾದವರ ಅನುಭವ. ಅವರೇ ಹೇಳಿಕೊಂಡಿದ್ದಾರೆ.ಅವರಿಗೆ ಬಹಳ ಅನಾರೋಗ್ಯ ಆಗಿದ್ದಾಗ ಇದನ್ನು ಪ್ರತಿದಿನ ಪಾರಾಯಣ ಮಾಡಿದರಂತೆ. ಆ ಮಹಾ ತಾಯಿ ಅವರಿಗೆ ಅನುಗ್ರಹ ಮಾಡಿ ಆರೋಗ್ಯ ನೀಡಿದಳಂತೆ. ಇದನ್ನು ಹಾಡಲು ನನಗೆ ಅವರೇ ಸ್ಫೂರ್ತಿ. ಆ ಮಹಾಲಕ್ಷ್ಮೀ ದೇವಿಯೇ ನಿಂತು ನುಡಿಸಿದ್ದಾಳೆ. ಇದನ್ನು ಐದು ರಾಗಗಳಲ್ಲಿ ಹಾಡಲು ಪ್ರಯತ್ನಿಸಿದ್ದೇನೆ.
ಚಾರುಕೇಶಿ, ಶುದ್ಧ ಧನ್ಯಾಸಿ, ಹಂಸನಾದ, ಸಿಂಧುಭೈರವಿ ಮತ್ತು ದುರ್ಗಾ ರಾಗಗಳನ್ನು ಅಳವಡಿಸಿದ್ದೇನೆ. ನವರಾತ್ರಿಯಲ್ಲಿ ಪಾರಾಯಣ ಮಾಡಿದರೆ ವಿಶೇಷ ಫಲ.
ಶ್ರೀ ಮಧ್ವೇಶಾರ್ಪಣಮಸ್ತು🙏
Ellarigu navaraatriya shubhashayagalu🙏
Sri Indiresha daasa kruta sri lakshmi leelamruta. Daasaru lakshmi deviya leelegalannu bahala sundaravaagi varnisiddare. Idannu nityadalli paarayana maadidare aa mahalakshmi taayi aayuraarogya aishwaryagalannu karunisuttale. Idakke saakshi andare nanage bahala bekadavara anubhava.Avare helikondiddare. Idannu haadalu nanage avare spoorti. Mahalakshmiye nintu nudisiddale. Idannu 5 raagagalalli haadalu prayatnisiddene. Charukeshi, shuddha dhanyasi, hamsanada, sindhu bhairavi mattu durga raagagalannu alavadisikondiddene. Navaraatriyalli haadidare vishesha phala.
Sri madhvesharpanamastu🙏
drive.google.c...
Link for kannada lyrics
Негізгі бет ಶ್ರೀ ಲಕ್ಷ್ಮೀ ಲೀಲಾಮೃತ|shree lakshmi leelamruta |ಇಂದಿರೇಶ ದಾಸರು|Indiresha daasaru|Padmaja Vasudevachar
Пікірлер: 87