ನನ್ನ ಎಲ್ಲಾ ಪ್ರೀತಿಯ ವೀಕ್ಷಕರಿಗೆ ಶರಣು ಶರಣಾರ್ಥಿ ಹಾಗೂ ನಮಸ್ಕಾರಗಳು. ಇವತ್ತು ಮತ್ತೊಂದು ಅತ್ಯದ್ಭುತ ಜಾನಪದ ಗೀತೆ ನಿಮ್ಮೆಲ್ಲರಿಗೂ. ಇವತ್ತಿನ ಈ ಹಾಡಿನಲ್ಲಿ, ಶಿವನ ಹಾಗೂ ಗಂಗೆಯ ಸಂಭಾಷಣೆ ಯಾಗಿದ್ದು, ಅದ್ಭುತ ಜಾನಪದ ಹಾಡು ಇದಾಗಿದೆ. ಶಿವ- ಗಂಗೆ ಸರಸ ಸಲ್ಲಾಪದಲ್ಲಿ ಇದ್ದಾಗ, ತಾನು ತವರಿಗೆ ಹೋಗಿ ಬರುವೆ ಎಂದು ಗಂಗೆ ಕೇಳಿದಾಗ, ನಿನಗೆ ತವರಲ್ಲಿ ಯಾರು ಇದ್ದಾರೆ ಎನ್ನುತ್ತಾ, ಗಂಗೆಯನ್ನು ಶಿವಾ ಚಲುವ ದೇವಿ, ನೀರಿನಲ್ಲಿರುವ ನಿಜಮೂರ್ತಿ ಎಂದು ಬಣ್ಣಿಸುತ್ತಾರ. ಇದೆಲ್ಲವನ್ನೂ ಹಾಡಿನ ಮೂಲಕ ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ಇವತ್ತಿನ ಈ ಹಾಡು ತಮಗೆಲ್ಲ ಇಷ್ಟ ಆಗುತ್ತದೆ ಎಂದು ಭಾವಿಸಿದ್ದೇನೆ.
Dr. B. M. Baraker (Khushi)
ನನ್ನ channel link is given below:
Visit my channel :
/ khushithewow
SUBSCRIBE 🔔 LIKE 👍 ಮಾಡ್ರಿ ಮತ್ತು ನಿಮ್ಮ ಪ್ರೋತ್ಸಾಹ ಹೀಗೆ ಮುಂದುವರಿಯಲಿ😊
Our another channel :
/ luckilylaxmi
ಇವತ್ತಿನ ಹಾಡಿನ ವಿವರ:
ಮೂಲ ಸಂಗ್ರಹಣೆ:ಬಾರಕೇರ ಸಹೋದರಿಯರು ( ಲಕ್ಷ್ಮೀ, ಖುಷಿ, ರಾಜೇಶ್ವರಿ)
ಗಾಯನ:. ಖುಷಿ, ರಾಜೇಶ್ವರಿ
ಇಂದ್ರ ಲೋಕದ ಮಳಿಯ
ಚಂದ್ರ ಲೋಕದ ಮಳಿಯ
ಸುಂದರವಾದ ಮಳಿಯ ಸುರಿಯಲೆ...
ಜಯ ಮಂಗಳಂ ನಿತ್ಯ ಶುಭ ಮಂಗಳ |ಪ|
ಸುಂದರವಾದ ಮಳಿಯ ಸುರಿಯಲೆ ಶ್ರೀಗಂಗಾ
ಸರಸನಾಡ್ಯಳ ತನ್ನ ಪುರುಷರೊಡನೆ
ಜಯ ಮಂಗಳಂ ನಿತ್ಯ ಶುಭ ಮಂಗಳ |೧|
ಸರಸವನಾಡುತ ಪುರುಷನ ತಾ ಕೆಲ್ಯಾಳ
ಹೋಗಿ ಬರುವೆನು ದೇವಾ ತವರಿಗೆ
ಜಯ ಮಂಗಳಂ ನಿತ್ಯ ಶುಭ ಮಂಗಳ |೨|
ತವರಿಗೆ ಹೋಗಾಕ ನಿನಗ್ಯಾರ ಅಲ್ಲುಂಟು
ತಿಳಿದ ನೋಡ ಗಂಗಾ ಚಲುವ ದೇವಿ
ಜಯ ಮಂಗಳಂ ನಿತ್ಯ ಶುಭ ಮಂಗಳ|೩|
ಆರು- ಮೂರು ದಿನಾ ಮೀರಿದೊಂಭತ್ತ ದಿನ
ದಾರಿ ನೋಡೆನು ದೇವಾ ಹಗಲೆಲ್ಲಾ
ಜಯ ಮಂಗಳಂ ನಿತ್ಯ ಶುಭ ಮಂಗಳ |೪|
ದಾರಿನ ನೋಡಾಕ ಮೀರಿ ನಾ ಹೋಗಿಲ್ಲ
ನೀರಿನ ಒಳಗಿರುವ ನಿಜಮೂರ್ತಿಯೆ
ಜಯ ಮಂಗಳಂ ನಿತ್ಯ ಶುಭ ಮಂಗಳ|೫|
ನೀರಿನ ಒಳಗಿರುವ ನಿಜ ಮೂರ್ತಿ ಕೂಡಿಕೊಂಡು
ಒದಗಿ ಬರುವೆನು ದೇವಾ ನಿಮ ಪೂಜೇಕ
ಜಯ ಮಂಗಳಂ ನಿತ್ಯ ಶುಭ ಮಂಗಳ|೬|
.............................................................................
follow on my insta:
/ khushithewow
.
.
.
.
.
.
.
.
#krishnadevotionalsongs#khushithewow#kannadasobanepadagalu#folksongsbykhushithewow#aratihaadu#mangalaratihaadu#khushifunnyvedios#khushicomedyvlogs#maggalamaniakkaru#luckilylaxmi#ladiespassionkannada#devotionalsongs#ಅಣ್ಣತಂಗಿಹಾಡು#ರಕ್ಷಾಬಂಧನದಹಾಡು#ಆರತಿಹಾಡು#ಗೌರೀಹಾಡು#ಮಂಗಳಗೌರಿವ್ರತ#ಕೃಷ್ಣನಜನಪದಹಾಡು#ಜಾನಪದಹಾಡುಗಳು#ಸೋಬಾನೆಪದಗಳು#ಭಕ್ತಿಗೀತೆಗಳು#ದೇವರಹಾಡು#ಹೇಮರಡ್ಡಿಮಲ್ಲಮ್ಮನಹಾಡು#ಹೇಮರಡ್ಡಿಮಲ್ಲಮ್ಮನಕಥೆ#ಬಸವಣ್ಣನವರವಚನಗಳು#ವಚನಗಳು#khushithewow#sobanepadagalu#folksongs#janapadahadu#devotionalsongs#bhaktigeetegalu#hemaraddimallammanakathe#hemaraddimallammanahaadu#panchamihabba#rakshabandhanfolksong#rakshabandhanadajanapadahadu#allinoduillinodukrishnasong#purandaradasapada#dasarapadagalu#mangalaratihaadu#aratihaadu#gouripooja#mahalakshmisong#lakshmidevotionalsongs#mangalagourihaadu#shukragourihaadu#raghavendrashloka#luckilylaxmi#ladiespassionkannada
.
.
.
Thank you 😊
Негізгі бет ಆರತಿ ಹಾಡು|devotional song|ಸೋಬಾನೆಹಾಡು|Lord Shiva song|ಜಾನಪದ ಹಾಡು
Пікірлер: 31