ಎಲ್ಲರಿಗು ಶ್ರೀ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು🙏🙏
ಗುರುಗಳಾದ
ಶ್ರೀ ವಾಯುಜೀಯೋತ್ತಮ ಆಚಾರ್ಯ ರಾಯಚೂರು ಇವರು ಕಲಿಸಿದ ಶ್ರೀ ವಿಜಯದಾಸರ ಪದವನ್ನು ನಾವು ಹಾಡಲು ಪ್ರಯತ್ನ ಮಾಡಿದ್ದೇವೆ, ಕೇಳಿ ಆನಂದಿಸಿ🙏🙏
ರಚನೆ : ಶ್ರೀ ವಿಜಯ ದಾಸರು
ಗಾಯನ : ವೀಣಾ ಮಾಡಗಿರಿ, ಸುಪ್ರೀತಾ ಪ್ರದೀಪ್, ನಮ್ರತಾ ಪ್ರದೀಪ್
ಹಾರ್ಮೋನಿಯಮ್: ನಮ್ರತಾ ಪ್ರದೀಪ್
ಗುರುಗಳು : ಶ್ರೀ ವಾಯುಜೀಯೋತ್ತಮ ಆಚಾರ್ಯ
.
A very happy Varamahalakshmi Festival to all of you!
On this auspicious occasion, we would like present to you a Dasarapada, 'Sri Mahalakumi Deviye' written by Shri Vijaya Daasaru
Lyrics : Shri Vijaya Daasaru
Sung by : Veena Madgiri, Supreetha Pradeep, Namratha Pradeep
Harmonium: Namratha Pradeep
Gurugalu : Shri Vaayujeeyottama Acharya
Please do watch, like, share and subscribe!🙏
Thank you!
.
ಶ್ರೀ ಮಹಾಲಕುಮಿ ದೇವಿಯೆ ಕೋಮಲಾಂಗಿಯೆ ಸಾಮಗಾಯನ ಪ್ರಿಯಳೇ |
ಹೇಮಗರ್ಭ ಕಾಮಾರಿ ಶಕ್ರಸುರ ಸ್ತೋಮ ವಂದಿತಳೆ ಸೋಮಸೋದರಿಯೇ || ಪ ||
ಸಕಲ ಶುಭಗುಣ ಭರಿತಳೆ ಏಕ ದೇವಿಯೆ ವಾಕು ಲಾಲಿಸಿ ನೀ ಕೇಳೆ
ಲೋಕನಾಥನ ಗುಣ ಲೀಲೇ ಕೊಂಡಾಡುವಂಥ ಏಕಮನವ ಕೊಡು ಶೀಲೆ
ಬೇಕುಬೇಕು ನಿನ್ನ ಪತಿಪಾದಾಬ್ಜವ ಏಕಾಂತದಲಿ ಭಜಿಪರ ಸಂಗವ ಕೊಡು
ಲೋಕದ ಜನರಿಗೆ ನಾ ಕರವೊಡ್ಡದಂತೆ ತಾಯೆ ಕರುಣಿಸು ರಾಕೆಂದುವದನೆ || ೧ ||
ಬಟ್ಟಕುಂಕುಮ ನೊಸಲೊಳೆ ಮುತ್ತಿನ ಹೊಸ ಕಠ್ಠಾಣಿ ತ್ರಿವಳಿ ಕೊರಳೊಳೆ
ಇಟ್ಟ ಪೊನ್ನೋಲೆ ಕಿವಿಯೊಳೆ ಪವಳದ ಕಯ್ಯ ಕಟ್ಟು ಕಂಕಣ ಕೈ ಬಳೆ
ತೊಟ್ಟ ಕುಬುಸ ಬಿಗಿದುಟ್ಟ ಪೀತಾಂಬರ ಘಟ್ಟಿ ವಡ್ಯಾಣ ಕಾಲಂದುಗೆ ರುಳಿಗೆಜ್ಜೆ
ಬೆಟ್ಟಿಲಿ ಪೊಳೆವುದು ಮೇಂಟಕೆ ಕುರುಪಿಲ್ಲಿ ಇಟ್ಟು ಶೋಭಿಸುವ ಅಷ್ಟ ಸಂಪನ್ನೆ || ೨ ||
ಮಂದರೋದ್ಧರನರಸಿಯೆ ಇಂದಿರೆ ಎನ್ನ ಕುಂದುದೋಷಗಳಳಿಯೆ
ಅಂದುಳ್ಳ ಸೌಭಾಗ್ಯದಸಿರಿಯೇ ನಿನ್ನ ಕಂದನೆಂದು ಮುಂದಕ್ಕೆ ಕರೆಯೇ
ಸಿಂಧುಶಯನ ಸಿರಿ ವಿಜಯ ವಿಠ್ಠಲರೇಯ ಎಂದೆಂದಿಗೂ ಮನದಿಂದಗಲದೆ
ಆನಂದದಿಂದಲಿ ಬಂದು ಮುಂದೆ ಕುಣಿಯುವಂತೆ ವಂದಿಸಿ ಪೇಳಮ್ಮ ಸಿಂಧು ಸುತೆಯಳೆ || ೩ ||
Негізгі бет Shri Mahalakumi Deviye | ಶ್ರೀ ಮಹಾಲಕುಮಿ ದೇವಿಯೇ |
Пікірлер: 87