Created by InShot
v.inshotapp.ne...
My KZitem Channel link:
/ @kalachakra5988
My Facebook Page link:
/ laxminarayana.p.3
My Instagram link:
instagram.com/...
#EiffelTowerSummitTour #TulipGardenAmsterdam #MtTitlis #SanMarino #VaticanCity #StPetersBasilica #TreviFountain #LeaningTowerofPisa #MonteCarlo #MallalliFalls #KamsaVivaha #Panchavati #HiranyakshaVadhe #MirjanFort #RockGardenKarwar #WarshipMuseumKarwar #ApsarakondaFalls #BruhadisvaraTempleThanjavur #SharavatiMangroveBoardWalkHonnavar #ShreeSeneshwaraTempleByndoor #ShreeNandikeshwaraTempleMekkekattu #KalluGanapathiDevasthana
ವೆಲ್ಲಂಕನಿ ಆರೋಗ್ಯಮಾತಾ ಬೆಸಿಲಿಕ, ತಮಿಳುನಾಡು
ವೆಲ್ಲಂಕನಿ ಆರೋಗ್ಯಮಾತಾ ಬೆಸಿಲಿಕವು ತಮಿಳುನಾಡಿನ ನಾಗಪಟ್ಟಣ ಜಿಲ್ಲೆಗೆ ಸೇರಿದೆ. ಇದು ನಾಗಪಟ್ಟಣ ಪೇಟೆಯಿಂದ ಸುಮಾರು 12 ಕಿ.ಮೀ. ಹಾಗೂ ಚೆನ್ನೈ-ನಿಂದ ದಕ್ಷಿಣಕ್ಕೆ 350 ಕಿ.ಮೀ. ದೂರದ ಬಂಗಾಳ ಕೊಲ್ಲಿಯ ದಡದಲ್ಲಿರುವ ಕ್ಯಾಥೊಲಿಕ್ ಕ್ರಿಶ್ಚಿಯನರ ಒಂದು ಪವಿತ್ರ ಆರಾಧನಾ ಕೇಂದ್ರ. ಇಲ್ಲಿ ಕ್ರಿಶ್ಚಿಯನರ ಆರಾಧ್ಯ ದೈವ ಜೀಸಸ್ ಕ್ರೈಸ್ಟ್ ಅವರ ತಾಯಿ ಮೇರಿ ಅಮ್ಮನವರ ಪವಿತ್ರ ದೇಗುಲವಿದೆ. ಕ್ರಿಶ್ಚಿಯನರ ಪರಮೋಚ್ಚ ಧಾರ್ಮಿಕ ಗುರುಗಳಾದ ಪೋಪ್ ಅವರು ವೆಲ್ಲಂಕನಿಯ ಈ ದೇಗುಲಕ್ಕೆ “ಬೆಸಿಲಿಕ” ದರ್ಜೆಯ ಗೌರವವನ್ನು ನೀಡಿದ್ದಾರೆ. ಉಳಿದ ಸಾಮಾನ್ಯ ಚರ್ಚ್-ಗಳಿಗಿಂತ ಬೆಸಿಲಿಕವು ಹೆಚ್ಚಿನ ಸ್ಥಾನಮಾನವನ್ನು ಹೊಂದಿದ ಪವಿತ್ರ ಆರಾಧನಾ ಕೇಂದ್ರವಾಗಿರುತ್ತದೆ.
ಪ್ರಚಲಿತವಿರುವ ಐತಿಹ್ಯದಂತೆ ಮೇರಿ ಮಾತೆಯು 16ನೇ ಶತಮಾನದಲ್ಲಿ ಒಮ್ಮೆ ತನ್ನ ದಿವ್ಯ ಕಂದನೊಂದಿಗೆ ಹಾಲನ್ನು ಒಯ್ಯುತ್ತಿದ್ದ ಓರ್ವ ಕುಂಟು ಕಾಲಿನ ಬಾಲಕನಿಗೆ ಕಾಣಿಸಿಕೊಂಡು ತನ್ನ ಮಗುವಿನ ಬಾಯಾರಿಕೆ, ಹಸಿವು ನೀಗಿಸಲು ಹಾಲು ಕೇಳಿದಳಂತೆ. ಮುಗ್ಧ ಬಾಲಕ ಮೇರಿ ಮಾತೆಯ ದಿವ್ಯ ಶಿಶುವಿಗೆ ಹಾಲನ್ನು ನೀಡಿದನಂತೆ. ಬಳಿಕ ಮೇರಿ ಮಾತೆಯು ನಾಗಪಟ್ಟಣಕ್ಕೆ ತೆರಳಿ ಓರ್ವ ಸದ್ಗೃಹಸ್ಥನಲ್ಲಿ ತನಗಾಗಿ ಒಂದು ಮಂದಿರವನ್ನು ನಿರ್ಮಿಸುವಂತೆ ಹೇಳು ಎಂದು ತಿಳಿಸಿ ಅದೃಶ್ಯಳಾದಳಂತೆ. ಕುಂಟು ಕಾಲಿನ ಬಾಲಕ ಓಡೋಡುತ್ತಾ ಆ ಸದ್ಗೃಹಸ್ಥನಲ್ಲಿ ವಿಷಯ ತಿಳಿಸಿದನಂತೆ. ಬಾಲಕನ ಅಂಗವೈಕಲ್ಯ ತನ್ನಿಂದ ತಾನೇ ಗುಣವಾದುದನ್ನು ಕಂಡು ಬೆರಗು ಹಾಗೂ ಧನ್ಯತಾ ಭಾವದಿಂದ ಮೇರಿ ಮಾತೆಗಾಗಿ ಒಂದು ಚಿಕ್ಕ ಗುಡಿಯನ್ನು ನಿರ್ಮಿಸಲಾಯಿತಂತೆ. ಅಂದಿನಿಂದ ಈ ದೇಗುಲ “ಆರೋಗ್ಯ ಮಾತಾ ಮಂದಿರ”ವೆಂದು ಪ್ರಸಿದ್ಧವಾಯಿತಂತೆ.
ಇನ್ನೊಂದು ಐತಿಹ್ಯದಂತೆ 17 ನೇ ಶತಮಾನದಲ್ಲಿ ಪೋರ್ಚುಗೀಸ್ ನೌಕೆಯೊಂದು ಬಂಗಾಳ ಕೊಲ್ಲಿಯಲ್ಲಿ ಬಿರುಗಾಳಿಗೆ ಸಿಲುಕಿದಾಗ ಅದರಲ್ಲಿದ್ದ ನಾವಿಕರು ತಮ್ಮನ್ನು ರಕ್ಷಿಸೆಂದು ಮೇರಿ ಮಾತೆಗೆ ಪ್ರಾರ್ಥನೆ ಸಲ್ಲಿಸಿದರಂತೆ. ಬಳಿಕ ಸಮುದ್ರ ಶಾಂತವಾಗಿ ಅವರು ಸುರಕ್ಷಿತವಾಗಿ ಮೇರಿ ಮಾತೆಯ ಹುಟ್ಟು ಹಬ್ಬದ ದಿನವಾದ ಸೆಪ್ಟೆಂಬರ್ 8 ರಂದು ಡಡ ಸೇರಿದ ಜಾಗೆಯೇ ವೆಲ್ಲಂಕನಿ. ಅವರು ತಮ್ಮ ಕೃತಜ್ನತೆಯ ಸೂಚಕವಾಗಿ ನಿರ್ಮಿಸಿದ ಗುಡಿಯೇ “ಆರೋಗ್ಯ ಮಾತಾ ಮಂದಿರ”ವೆಂದು ಪ್ರಸಿದ್ಧವಾಯಿತಂತೆ. ಇಂದಿಗೂ ಸೆಪ್ಟೆಂಬರ್ 8 ರಂದು ವೆಲ್ಲಂಕನಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬಹು ವಿಜೃಂಭಣೆಯಿಂದ ಜರಗುತ್ತದೆ. ಹಿಂದೂ ಸಂಪ್ರದಾಯಗಳೆಂದು ಗುರುತಿಸಲ್ಪಡುವ ಹರಕೆ ಸಲ್ಲಿಸುವ ಕ್ರಮ, ಕೇಶಮುಂಡನ ಹಾಗೂ ಸಾಲಂಕೃತ ರಥ, ಪಲ್ಲಕ್ಕಿಯಲ್ಲಿ ಆರೋಗ್ಯಮಾತೆ ಮತ್ತು ಇತರ ಸಂತರ ಮೂರ್ತಿಗಳ ಮೆರವಣಿಗೆ ಇಲ್ಲಿನ ವಿಶೇಷ. ಇಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಭಕ್ತರು ತಮ್ಮ ಸಂತಾನ ಪ್ರಾಪ್ತಿ ಹಾಗೂ ಇನ್ನಿತರ ಕೋರಿಕೆಗಳನ್ನು ಈಡೇರಿಸಿದ ಕುರಿತು ನೀಡಿದ ಹರಕೆಯ ಸಾಮಾಗ್ರಿಗಳ ದೊಡ್ಡ ಸಂಗ್ರಹವೇ ಇದೆ. ಅನೇಕ ಹಿಂದೂ, ಮುಸ್ಲಿಮ್ ಜನರು ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸುವುದು ಒಂದು ನಿತ್ಯದ ವಿದ್ಯಮಾನ. ಹಾಗಾಗಿ ಇಂದು ವೆಲ್ಲಂಕನಿಯು ಧಾರ್ಮಿಕ ಸಾಮರಸ್ಯದ ಒಂದು ಮಹತ್ವದ ಒಂದು ಪವಿತ್ರ ಆರಾಧನಾ ಕೇಂದ್ರವಾಗಿ ಗುರುತಿಸಲ್ಪಡುತ್ತದೆ.
ಫ್ರಾನ್ಸ್ ದೇಶದ ಲೂರ್ಡ್ಸ್ ಎಂಬಲ್ಲಿ ಫೆಬ್ರುವರಿ 11, 1858 ರಂದು ಮೇರಿ ಮಾತೆಯು ಓರ್ವ ರೈತಾಪಿ ಬಡ ಹುಡುಗಿಗೆ ಕಾಣಿಸಿಕೊಂಡ ಐತಿಹ್ಯವಿದೆ. ಅಲ್ಲಿರುವ ಒಂದು ಪವಿತ್ರ ಜಲಕುಂಡದ ನೀರು ಸಕಲ ರೋಗಗಳಿಗೂ ಪರಮೌಷಧ ಎಂಬ ನಂಬಿಕೆ ಭಕ್ತಜನರದ್ದು. ಲೂರ್ಡ್ಸ್ ಒಂದು ಪವಿತ್ರ ಯಾತ್ರಾಸ್ಥಳವಾಗಿದೆ. ವೆಲ್ಲಂಕನಿ ಆರೋಗ್ಯಮಾತಾ ಬೆಸಿಲಿಕದ ಐತಿಹ್ಯಕ್ಕೂ ಲೂರ್ಡ್ಸ್-ನ ಐತಿಹ್ಯಕ್ಕೂ ಇರುವ ಸಾಮ್ಯತೆಯಿಂದ ವೆಲ್ಲಂಕನಿ ಆರೋಗ್ಯಮಾತಾ ಬೆಸಿಲಿಕವನ್ನು “ಪೂರ್ವದ ಲೂರ್ಡ್ಸ್” ಎಂದು ಕರೆಯುತ್ತಾರೆ.
Негізгі бет VELANKANNI - “The Lourdes of the East” (30.09.2024)
Пікірлер