ಗೋವುಗಳ ಸೇವೆಮಾಡಬೇಕು.ಗೋವಿನ ಸೇವೆ ಮಾಡುವುದರಿಂದ ಸಂತತಿ,ಸಂಪತ್ತು,ಅರೋಗ್ಯ,ಕೀರ್ತಿ ಇವೆಲ್ಲವನ್ನೂ ಸಂಪಾದಿಸಿಕೊಳ್ಳಬಹುದು. ಪರಮಾತ್ಮನ ಕೃಪೆ ದೊರಕಿಸಿಕೊಳ್ಳಬಹುದು,
ಮೋಕ್ಷಕ್ಕೆ ಅನುವಾಗಿ ನಡೆದುಕೊಳ್ಳಬಹುದು.
ತಾಯಿ ಕೆಲವೇ ದಿನ ಹಾಲು ಕೊಡುತ್ತಾಳೆ, ಆದರೆ ಹಸು ನಾವು ಮುದುಕರಾಗುವ ವರೆಗೂ ಹಾಲು ಕೊಡುತ್ತದೆ.
ಗೋವಿನಷ್ಟು ಪವಿತ್ರವಾದ ಪ್ರಾಣಿ ಯಾವುದಾದರು ಈ ಜಗತ್ತಿನಲ್ಲಿ ಇದೆಯಾ?
ಪಂಚಗವ್ಯ ಪ್ರಾಶನದಿಂದ ಎಷ್ಟು ಪಾಪವಿದೆಯೋ ಅಷ್ಟೂ ನಾಶವಾಗುತ್ತದೆ.
ಗೋವಿನ ಮಲಮೂತ್ರದಲ್ಲಿ ಎಲ್ಲ ಪಾಪವನ್ನು ಹೋಗಲಾಡಿಸುವಂತಹ ಸಾಮರ್ಥ್ಯವಿದೆ.
ತೀರ್ಥಸ್ನಾನಾದಿಗಳಿಂದ ಎಷ್ಟು ಪುಣ್ಯವೋ, ಬ್ರಾಹ್ಮಣರಬೋಜನವನ್ನು ಮಾಡಿಸಿದರೆ ಎಷ್ಟು ಪುಣ್ಯವೋ, ದಾನವನ್ನು ಮಾಡಿದರೆ ಎಷ್ಟು ಪುಣ್ಯವೋ, ಪರಮಾತ್ಮನ ಭಕ್ತಿಯನ್ನು ಮಾಡಿದರೆ ಎಷ್ಟು ಪುಣ್ಯವೋ, ಎಲ್ಲ ವ್ರತ-ಉಪವಾಸಗಳನ್ನು ಮಾಡಿದರೆ ಎಷ್ಟು ಪುಣ್ಯವೋ, ಅಷ್ಟು ಪುಣ್ಯ ಕೇವಲ ಧೇನು(ಗೋಸೇವೆ) ಸೇವೆಯಿಂದ ದೊರೆಯುತ್ತದೆ.
(ಸದ್ಗುರು ಭಗವಾನ್ ಶ್ರೀ ಶ್ರೀಧರಸ್ವಾಮಿಗಳವರು ಅನುಗ್ರಹಿಸಿದ ಅಂತಿಮ ಪ್ರವಚನದಿಂದ ಆಯ್ದ ಭಾಗ)
Негізгі бет Музыка ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳು ರಚಿಸಿರುವ ಗೋ ಪೂಜಾ ಸ್ತೋತ್ರ / Go Pooja Stotra
Пікірлер: 11