ದೇವಕಿಕಂದ ಮುಕುಂದ
ನಿಗಮೋದ್ಧಾರ - ನವನೀತ ಚೋರ
ಖಗಪತಿ ವಾಹನ ಜಗದೋದ್ಧಾರ
ಶಂಖ - ಚಕ್ರಧರ - ಶ್ರೀ ಗೋವಿಂದ
ಪಂಕಜಲೋಚನ ಪರಮಾನಂದ
ಮಕರಕುಂಡಲಧರ - ಮೋಹನವೇಷ
ರುಕುಮಿಣಿವಲ್ಲಭ ಪಾಂಡುವಪೋಷ
ಕಂಸಮರ್ದನ - ಕೌಸ್ತುಭಾಭರಣ
ಹಂಸ - ವಾಹನ ಪೂಜಿತ ಚರಣ
ವರವೇಲಾಪುರ ಚೆನ್ನಪ್ರಸನ್ನ
ಪುರಂದರವಿಠಲ ಸಕಲಗುಣ ಪೂರ್ಣ
Негізгі бет Devaki Kanda Mukunda | ದೇವಕಿ ಕಂದ ಮುಕುಂದ| In association with Spandana TV | Malkauns |
Пікірлер: 173