ಬೆಂಗಳೂರಿನ ನಿಮಾನ್ಸ್ ,ರಾಜೀವ್ ಗಾಂಧಿ ಎದೆ ರೋಗ ಆಸ್ಪತ್ರೆ, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ, ಸಂಜಯ್ ಗಾಂಧಿ ಆಸ್ಪತ್ರೆ , ಈ ಆಸ್ಪತ್ರೆಗಳ ಮಧ್ಯಭಾಗದಲ್ಲಿ ಪ್ರತಿದಿನ ಕಳೆದ ಏಳು ವರ್ಷದಿಂದ ಬೆಳಗಿನ ಉಪಹಾರ ಬ್ರೇಕ್ ಫಾಸ್ಟ್ ಅನ್ನು ಫ್ರೀಯಾಗಿ ನೀಡುತ್ತಿದ್ದಾರೆ
ಪ್ರತಿದಿನ ಇಲ್ಲಿ ಬೆಳಗಿನ ತಿಂಡಿಯನ್ನು ಎಂಟುನೂರು ಜನಕ್ಕೂ ಹೆಚ್ಚು ಫ್ರೀಯಾಗಿ ಇಲ್ಲಿ ಕೂಲಿ ಕಾರ್ಮಿಕರು, ಆಟೋ ಚಾಲಕರು, ಬಿಬಿಎಂಪಿ ಕಾರ್ಮಿಕರು, ಆಸ್ಪತ್ರೆಯ ನೌಕರರು, ಹೂರರೋಗಿಗಳು ಹಾಗೂ ಇತರೆ ಯಾವುದೇ ಸಾಮಾನ್ಯ ಜನರಿಗೂ ಕೂಡ ಇಲ್ಲಿ ಫ್ರೀಯಾಗಿ ಬೆಳಗಿನ ತಿಂಡಿಯನ್ನು ನೀಡುತ್ತಿದ್ದಾರೆ
ಸಮಾನ ಮಸ್ಕರ ತಂಡ ಒಂದು ಈ ಅನ್ನ ದಾಸೋಹ ಕಾರ್ಯಕ್ರಮವನ್ನು ನಡೆಸುತ್ತಿದ್ದು ಈ ಕಾರ್ಯಕ್ರಮವು ವಿಲ್ಸನ್ ಗಾರ್ಡನ್ ಹೊಂಬೆಗೌಡ ಹೈಸ್ಕೂಲ್ ನ 2017ನೆ ಬ್ಯಾಚ್ ವಿದ್ಯಾರ್ಥಿಗಳು ಪ್ರಾರಂಭಿಸಿದ್ದು ಇದುವರೆಗೂ ಅವರು ಮತ್ತು ಇನ್ನಿತರೆ ನೂರಾರು ಜನಗಳು ಈ ಅನ್ನದಾಸೋಹವನ್ನು ಪ್ರತಿದಿನ ತಪ್ಪದೆ ನಡೆಸುತ್ತಾ ಬಂದಿದ್ದಾರೆ ಜೊತೆಗೆ ಬಡ ವಿದ್ಯಾರ್ಥಿಗಳಿಗೂ ಕೂಡ ಶಿಕ್ಷಣಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಪ್ರತಿವರ್ಷ ನೀಡುತ್ತಾ ಬಂದಿದ್ದಾರೆ ಅದರ ಪರಿಣಾಮವಾಗಿ ಒಂದು ಹೆಣ್ಣು ಮಗುವನ್ನು ಎಂಬಿಬಿಎಸ್ ಮತ್ತೊಬ್ಬರನ್ನು ಎಂಬಿಎ ಬಿಕಾಂ ಹೀಗೆ ಓದಿಸುತ್ತಿದ್ದಾರೆ ಜೊತೆಗೆ ಆಸ್ಪತ್ರೆಗೆ ಬರುವ ಕಡುಬಡತನದ ಬಡವರಿಗೆ ಉಚಿತ ಔಷಧಿಗಳನ್ನು ಕೂಡ ಕೊಡಿಸುತ್ತಿದ್ದಾರೆ ಈ ಎಲ್ಲಾ ಕೆಲಸಗಳನ್ನು ಮಾಡುತ್ತಿರುವ ಈ ತಂಡದವರು ಪ್ರತಿಯೊಬ್ಬರು ತಮ್ಮದೇ ಆದ ಒಂದೊಂದು ವ್ಯವಹಾರ ,ವ್ಯಾಪಾರ ಹಾಗೂ ಕೆಲವರು ಉನ್ನತ ನೌಕರಿಗಳಲ್ಲಿದ್ದು ಈ ಎಲ್ಲಾ ಸಮಾನ ಮನಸ್ಕರು ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಈ ಜನಪಯೋಗಿ ಅನ್ನದಾಸೋಹಕ್ಕೆ ಪ್ರತಿ ತಿಂಗಳು ನೀಡುತ್ತಾ ತಾವುಗಳೇ ಸ್ವಯಂಸೇವಕರಾಗಿ ಪ್ರತಿದಿನ ಬೆಂಗಳೂರಿನ ಮೂಲೆ ಮೂಲೆಯಿಂದ ಬಂದು ಅನ್ನದಾಸೋಹ ನೆಡೆಸಿ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ತೆರಳುತ್ತಿರುವುದು ಇಲ್ಲಿಯ ಸ್ವಯಂಸೇವಕರ ಮಾನವೀಯ ಗುಣ
ಈ ತಂಡವು ಅಕ್ಷಯ ಅನ್ನ ದಾಸೋಹ ಟ್ರಸ್ಟ್ ಒಂದನ್ನು ನಿರ್ಮಿಸಿಕೊಂಡು ಇದರ ಅಡಿಯಲ್ಲಿ ಇವರ ಕೆಲಸಗಳನ್ನು ಗುರುತಿಸಿ ಅನ್ನದಾಸೋಹ ಮತ್ತೆ ಇತರೆ ಸೇವಾಕಾರಿಗಳಿಗೆ ದಾನಿಗಳು ನೀಡುವ ಹಣವನ್ನು ಕೂಡ ಬಳಸಿಕೊಂಡು ಮುನ್ನಡೆಯುತ್ತಿದ್ದಾರೆ ಜನಮನ ಗೆದ್ದು
.........................................................
location
NIMHANS hospital
Bangaluru
.........................................................
ಸಂಪರ್ಕಿಸಿ
ಮೊಬೈಲ್=9945070144
ಅಕ್ಷಯ ಅನ್ನ ದಾಸೋಹ ಟ್ರಸ್ಟ್
ಬೆಂಗಳೂರು
Негізгі бет Free breakfast giving in NIMHANS near Bangalore
No video
Пікірлер: 87