#malaayana #gokarna #vedicvillage
ಗೋಕರ್ಣಕ್ಕೆ ಭೇಟಿ
ಮೇ 2, 204 ರಂದು ಮಂಗಳೂರಿನಿಂದ ಹೊರಟಿದ್ದ ನಾವು ಸುಮಾರು 5 ಗಂಟೆ ಕಾರಿನಲ್ಲಿ ಪ್ರಯಾಣಿಸಿ, ಗೋಕರ್ಣದಲ್ಲಿರುವ 'ವೇದಿಕ್ ವಿಲೇಜ್' ತಲಪಿದಾಗ ಮಧ್ಯಾಹ್ನವಾಗಿತ್ತು, ಹೋಂ ಸ್ಟೇಯ ಮಾಲಿಕರಾದ ಶ್ರೀ ರಾಜೀವ್ ಬೈಲ್ ಕೇರಿ ಮತ್ತು ಶ್ರೀಮತಿ ರೂಪಶ್ರೀ ಅವರು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದರು. ಮಧ್ಯಾಹ್ನದ ಊಟಕ್ಕೆ ಸ್ಥಳೀಯ ವೈವಿಧ್ಯತೆಯುಳ್ಳ ಅನ್ನ, ಬದನೆಕಾಯಿ ಭಾರ್ತಾ, ಸೌತೆಕಾಯಿ ಹಶಿ, ತಂಬುಳಿ, ಕೋಸಂಬರಿ, ನುಗ್ಗೆಕಾಯಿ ಸಾಂಬಾರು, ಬಾಳಕ ಮೆಣಸು, ಬೆಂಡೆಕಾಯಿ ಫ್ರೈ, ಬಟಾಣಿ ಗ್ರೇವಿ, ಚಪಾತಿ ಮೊದಲಾದುವುಗಳಿದ್ದುವು. ಉಪಚಾರ ಮಾಡುತ್ತಾ ಆದರದಿಂದ ಊಟ ಬಡಿಸುವ ಮನೆ ಮಂದಿ. ಮೇ ತಿಂಗಳ ಸೆಕೆಯಿದ್ದರೂ ಸುತ್ತಲೂ ಹಬ್ಬಿದ್ದ ಹಸಿರು ಪರಿಸರ ಹಾಗೂ ಅರಬೀ ಸಮುದ್ರದಿಂದ ಮೇಲಿಂದ ಬೀಸಿ ಬರುತ್ತಿದ್ದ ತಂಗಾಳಿ ಹಿತವೆನಿಸಿತ್ತು. ಇನ್ನೇನು ಬೇಕು? 'ಹೋಂ ಅವೇ ಫ್ರಮ್ ಹೋಂ' (Home Away From Home) ಎಂಬ ಪರಿಕಲ್ಪನೆ ಸಾಕಾರಗೊಂಡಿದೆ ಇಲ್ಲಿ ಎನಿಸಿತು.
ಇಲ್ಲಿ ಒಟ್ಟು ಎರಡು ವಿಶಾಲವಾದ ಕಾಟೇಜ್ ಗಳಿವೆ. ಅಚ್ಚುಕಟ್ಟಾದ ವ್ಯವಸ್ಥೆಯುಳ್ಳ ವಿಶಾಲವಾದ ನಾಲ್ಕು ರೂಮ್ ಗಳಿವೆ. ಪ್ರತಿ ಕಾಟೇಜ್ ಗೆ ಹೊಂದಿಕೊಂಡಂತೆ ಒಂದು ಖಾಸಗಿ ಈಜುಕೊಳವಿದೆ. ಹೋಂಸ್ಟೇಯ ಮಾಲಿಅಕ್ರಾದ ಶ್ರೀ ರಾಜೀವ್ ಅವರ ಹವ್ಯಾಸಗಳು ಹಲವಾರು. ತಮ್ಮ ಆಸಕ್ತಿಗೆ ಪೂರಕವಾಗಿ ಮನೆಗೆ ಹೊಂದಿಕೊಂಡಂತೆ ಖಾಸಗಿ ಮ್ಯೂಸಿಯಂ (Museum) ಅನ್ನು ನಿರ್ಮಿಸಿದ್ದಾರೆ. ಇಲ್ಲಿ ಸ್ಥಳೀಯ ಹಾಗೂ ದೇಶದ ಇತರ ಸ್ಥಳಗಳಿಗೆ ಸಂಬಂಧಿಸಿದ ಹಲವಾರು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈಗ ಬಳಕೆಯಲ್ಲಿ ಇಲ್ಲದ ಹಿಂದಿನ ಕಾಲದ ಪಾತ್ರೆಗಳು, ದೀಪಗಳು, ಅಳತೆ ಮಾಪನಗಳು, ಬುಟ್ಟಿಗಳು, ಗೋಕರ್ಣಕ್ಕೆ ಬಂದಿದ್ದ ಗಣ್ಯ ವ್ಯಕ್ತಿಗಳ ಬಗ್ಗೆ ಮಾಹಿತಿ, ಪ್ರವಾಸಿಗರಿಗೆ ಉಪಯುಕ್ತವಾದ ವಿಚಾರಗಳು .....ಹೀಗೆ ಇವರ ಕಣಜದಲ್ಲಿ ಇರುವ ವೈವಿಧ್ಯತೆಯನ್ನು ಕಂಡು ನಾವು ಬೆರಗಾಗುತ್ತೇವೆ. ಅವರ ಸಂಗ್ರಹದಲ್ಲಿ ಇರುವ ಪ್ರತಿ ವಸ್ತುವಿನ ಹಿನ್ನೆಲೆ, ಉದ್ದೇಶ ಹಾಗೂ ವೈಶಿಷ್ಟ್ಯಗಳನ್ನು ಸೊಗಸಾಗಿ ವಿವರಿಸುವ ಅವರ ಉತ್ಸಾಹಕ್ಕೆ ಶರಣು.
ಗೋಕರ್ಣದ ಆಸುಪಾಸಿನಲ್ಲಿ ಹಲವಾರು ಪ್ರಮುಖ ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಬೀಚ್ ಗಳು, ಚಾರಣಾಸಕ್ತರಿಗೆ ಸೂಕ್ತವಾದ ತಾಣಗಳು ಇತ್ಯಾದಿ ಇವೆ. ಆಸಕ್ತರು ಹೆಚ್ಚಿನ ವಿವರಗಳಿಗೆ 'ವೇದಿಕ್ ವಿಲೇಜ್' ಅನ್ನು ಸಂಪರ್ಕಿಸಬಹುದು. ಫೋನ್: +91 94487 97381
ಹೇಮಮಾಲಾ.ಬಿ. ಮೈಸೂರು
Негізгі бет ಗೋಕರ್ಣಕ್ಕೆ ಭೇಟಿ |ವೇದಿಕ್ ವಿಲೇಜ್ ಹೋಂ ಸ್ಟೇ|Visit to Gokarna | Vedic Village Homestay|
Пікірлер: 4