ಹರೇ ಶ್ರೀನಿವಾಸ🙏
ನಮ್ಮೆಲ್ಲರ ಮನೆಯ ಹೆಣ್ಣು ಕೂಸಿಗೆ ತೊಟ್ಟಿಲ ಶಾಸ್ತ್ರದ ಹಾಡು.😍..
ಭಗವಂತನ ಪ್ರೇರಣೆಯಿಂದ ಬರೆದು ಹಾಡುವ ಪ್ರಯತ್ನ 🙏😍..
ನಿಮಗೆಲ್ಲರಿಗೂ ಇಷ್ಟವಾಗಬಹುದು ಅಂತ ಭಾವಿಸ್ತೀನಿ!! ❤️
ಜೋ ಜೋ ವೇದಾವತಿಯೇ |
ಜೋಗುಳ ಪಾಡಿ ನಾ ಹರಸುವೆ ಮಗುವೆ ||
ಜೋ ಜೋ ಭಗವತಿ ನಾರಾಯಣಿಯೇ |
ಜೋ ಜೋ ಮಂಗಳೆ ನಿತ್ಯ ನೂತನೆಯೇ||
ಜೋ ಜೋ ಅಗಣಿತ ಗುಣ ಮಂಡಿತಳೆ |
ಜೋ ಜೋ ಕರವೀರ ಪುರವಾಸಿನಿಯೇ ||
ಮಗಳೇ ನೀ ಎಮಗೆ ಮಾತೃ ರೂಪಿಣಿಯೇ |
ಮನೆ ಮನಗಳ ತುಂಬಿದ ಗುಣ ಕಣ್ಮಣಿಯೇ|
ಶಾಂತಿ ಸಹನೆ ಮಮತೆ ಕರುಣೆ ಧಾರಿಣಿಯೇ|
ಶಿವೆಯೇ ಜಗದಂಬೆ ಅನಘಳೆ ಊರ್ವಿಯೇ|
ಮೂರ್ಜಗದ ಮಾತೆ ಸುಜನರುದ್ಧಾರಿಯೇ ||
ರಮೆಯೇ ವಾಣಿಯೇ ಕಾತ್ಯಾಯಿನಿಯೇ |
ಮನದಭಿಮಾನಿ ವಿದ್ಯಾ ಪ್ರದಾಯಿನಿಯೆ|
ಧೀರೆ ಗಂಭೀರೆ ಕ್ಷಮಯಾ ಧರಿತ್ರಿಯೇ |
ಧಾತ್ರಿ ಸುಭದ್ರೆ ಕುಲದೇವತೆಯೆ|
ಹಾಯಾಗಿ ಮಲಗು ನೀ ಜಾಣೆ ಹಸುಗೂಸೆ ||
ಚಿನ್ನದ ತೊಟ್ಟಿಲೊಳು ನಗುವ ಸಿರಿ ದೇವತೆಯೇ |
ರನ್ನದಾರತಿ ಮಾಡಿ ಹರಸುವೆವು ನಿನಗೆ|
ಆರೋಗ್ಯ ದೀರ್ಘ ಆಯು ಕೀರ್ತಿ ಜಯವಿರಲಿ|
ದೃಷ್ಟಿ ತಾಕದಿರಲಿ ಸಿರಿಗಪ್ಪು ಬೊಟ್ಟನಿಡುವೆ |
ವರದ ವೆಂಕಟಗಿರಿಯೊಡೆಯನರಸಿಯೇ ||
_ ಚಂದ್ರಿಕಾ ಗಿರೀಶ್.
ಶ್ರೀ ಕೃಷ್ಣಾರ್ಪಣಮಸ್ತು 🙏..
ಸರ್ವರಿಗೂ ಶುಭ ರಾತ್ರಿ 🙏
ಶುಭ ಹಾರೈಕೆಗಳು 🌷.
Негізгі бет ಜೋ ಜೋ ಭಗವತಿ ನಾರಾಯಣಿಯೇ / jojo bhagavathi narayaniye / hennu maguvige tottila shastrada haadu.
Пікірлер: 29