ಮಂಗಳ ಗೌರಿಗೆ ಮಂಗಳ ಸೀಮಂತ
ತಿಂಗಳು ತುಂಬ್ಯಾವೆ ಜೀವ ಜೀವಂತ//ಪ//
1.ರನ್ನದಾರತಿ ಎತ್ತಿ ಬಂಗಾರಿಗೆ
ಕರುಳಕುಡಿ ಹೊತ್ತ ಸುಮಬಾಲೆಗೆ
ಮುತ್ತಿನಾರತಿ ಎತ್ತಿ ಸಿಂಗಾರಿಗೆ
ಪ್ರೀತಿ ಸೇಸೆ ಇಕ್ಕಿ ಸಿರಿ ಗೌರಿಗೆ //1//
2.ಅರಿಸಿನ ಹಚ್ಚಿರಿ ಕುಂಕುಮ ಇರಿಸಿರಿ
ಮಡಿಲಕ್ಕಿ ಕಟ್ಟಿರಿ ಮುತ್ತೈದೆಗೆ
ಹೂವನ್ನು ಮುಡಿಸಿ ಬಳೆಯನ್ನು ತೊಡಿಸಿರಿ
ಹಸಿರು ಸೀರೆ ಉಡಿಸಿ ಬಂಗಾರಿಗೆ//2//
3.ಮನೆದೀಪ ಹಚ್ಚುವ ಕಂದನ ಕೊಡಲೆಂದು
ಸಿಸೆ ಇಟ್ಟು ಹರಿಸಿ ಸಿರಿ ಮಗುಮ್ಯಾಗೆ
ದೃಷ್ಟಿ ಯ ಬಟ್ಟಿಟ್ಟು ಆರತಿ ಬೆಳಗಿರೆ
ಮಂಗಳ ನುಡಿಯಾಡಿ ಬಂಗಾರಿಗೆ
ಮಂಗಳ ನುಡಿಯಾಡಿ ಸಿರಿ ದೇವಿಗೆ//3//
Негізгі бет Mangalagowrige mangalada seemantha| ಮಂಗಳ ಗೌರಿಗೆ ಮಂಗಳ ಸೀಮಂತ / Seemanthada hadu
Пікірлер: 76