ರಾಗ : ಆನಂದ ಭೈರವಿ
ಲಿರಿಕ್ಸ್/ಸಾಹಿತ್ಯ : ರಾಜೇಶ್ವರಿ N. V
ನಾಗರ ಪಂಚಮಿಯ ಆರತಿ ಹಾಡು
ಮುತ್ತಿನ ಆರತಿ ಮುಕುಂದನಿಗೆ
ರತ್ನದ ಆರತಿ ರಾಮನಿಗೆ
ಹವಳದ ಆರತಿ ಶ್ರೀಹರಿಗೆ (ನನ್ನ)
ಮುದ್ದು ಅಣ್ಣಯ್ಯಗೆ ಹೊನ್ನಿನ ಆರತಿ (ನನ್ನ)
ಮುದ್ದು ತಮ್ಮನಿಗೆ ಹೊನ್ನಿನ ಆರತಿ
ಪಚ್ಚೆಯ ಆರತಿ ಪರಮೇಶಗೇ
ಬಣ್ಣದ ಆರತಿ ಬ್ರಹ್ಮನಿಗೆ
ತುಪ್ಪದ ಆರತಿ ತಾಮಸ ಹಾರಿಗೆ (ನನ್ನ)
ಮುದ್ದು ಅಣ್ಣಯ್ಯಗೆ ವಜ್ರದ ಆರತಿ (ನನ್ನ )
ಮುದ್ದು ತಮ್ಮನಿಗೆ ವಜ್ರದ ಆರತಿ
ಮಾನಿನಿಯ ಕಾಯ್ದ ಶ್ರೀಕೃಷ್ಣಗೆ
ಗೋಪೂಜೆ ಹೇಳಿದಾ ಗೋಪೀ ಸುತಗೆ
ಸುಭದ್ರೆ ಪ್ರೇಮ ಕಾಯ್ದ ಸುಧಾಮ ಸಖಗೆ (ನನ್ನ)
ಮುದ್ದು ಅಣ್ಣಯ್ಯಗೆ ನವರತ್ನದ ಆರತಿ (ನನ್ನ)
ಮುದ್ದು ತಮ್ಮನಿಗೆ ನವರತ್ನದ ಆರತಿ
Негізгі бет Muttina aarathi mukundanige| Aarathi haadu anna tammandirige/ ನಾಗರ ಪಂಚಮಿ ಹಾಡು ಅಣ್ಣ ತಮ್ಮಂದಿರಿಗೆ
Пікірлер: 169