ಒಳ್ಳೆಯ ಪುಸ್ತಕ ಓದಿದಾಗ ಬೆಳಗುವುದು ಜ್ಞಾನದ ಹಣತೆ
ನಿನ್ನ ಜೊತೆ ಸಮಯ ಕಳೆದರೆ ಕಾಡುವುದು ಜ್ಞಾನದ ಕೊರತೆ
ಎಲ್ಲ ಕಡೆ ಇಹುದು ನಿನ್ನ ಬೆಂಬಿಡದ ಛಾಯೆ
ಸಣ್ಣ ಮಕ್ಕಳಿಗೂ ಬಿಡದು ನಿನ್ನ ಮಾಯೆ
ಗ್ರಂಥಾಲಯವಿದ್ದರೂ ಪಾಠ ಪ್ರವಚನಗಳ ನಿನಗೇ ಕಳುಹಿಸುವರಲ್ಲ
ವರುಷ ಕಳೆದರೂ ನಾ ಗ್ರಂಥಾಲಯದ ಕಡೆ ಹೋಗಲೇ ಇಲ್ಲ
ಮಿಂಚಂಚೆ , ವಾಟ್ಸಪ್ ಸಂದೇಶಗಳು ಓದಲು ಬಿಡಲಿಲ್ಲ
ಗ್ರಂಥಾಲಯದ ಪುಸ್ತಕಗಳು ಸುಮ್ಮನೆ ಧೂಳು ಹಿಡಿದವಲ್ಲ
ಬೆಳೆದಿತ್ತು ನನ್ನ ನಿನ್ನ ನಡುವೆ ಬಿಡಿಸಲಾರದ ನಂಟು
ಗೊತ್ತಿದ್ದರೂ ನನಗೆ ಬೆಳೆಸಲಾಗಲಿಲ್ಲ ಜ್ಞಾನದ ಗಂಟು
….
ಡಾ.ಎನ್ ಕೆ ಎಸ್
Негізгі бет nks ಕವನ 4
Пікірлер