ನೀ ಉಡುವ ವಸ್ತ್ರದ ಬಣ್ಣವಾದರೆ ಬಿಳಿ..
ದ್ವೇಷ, ಆಸೂಯೆ ನಿನ್ನ ಮನದಿಂದ ಕಳಿ...
ಆಗಸದ ತಾರೆಯಂತೆ ನೀ ಹೊಳಿ...
ಮುಗಿಲೆತ್ತರಕೆ ತಾಗುವಂತೆ ನೀ ಬೆಳಿ... ||೧ ||
ನೀ ಧರಿಸಿದ ವಸ್ತ್ರದ ಬಣ್ಣ ಕೆಂಪು..
ನಿನ್ನ ಸುತ್ತ ಇರಲಿ ಸಹೃದಯವಂತರ ಗುಂಪು..
ರಾಗಿ ಗಂಜಿ ಸದಾ ದೇಹಕ್ಕೆ ತಂಪು..
ಕೋಗಿಲೆ ಗಾಯನ ಕಿವಿಗೆ ಬಹು ಇಂಪು... ||೨ ||
ನೀ ದರಿಸಿದ ವಸ್ತ್ರದ ಬಣ್ಣ ನೀಲಿ...
ಪ್ರತಿದಿನವೂ ಸಂತಸದ ಕಡಲಲ್ಲಿ ತೇಲಿ...
ದುಶ್ಚಟಗಳು ನಿಮ್ಮ ಮನದಿಂದಾಗಲಿ ಖಾಲಿ ..
ಹಾಕಿರಿ ನಿಮ್ಮ ಸುತ್ತ ಶಿಸ್ತಿನ ಬೇಲಿ.... ||೩ ||
ಮನ ಅರಳುವುದು ಬಟ್ಟೆಯ ಬಣ್ಣವಿರೆ ಹಳದಿ ...
ಸಂತಸದ ಜೀವನಕೆ ಇಲ್ಲವೋ ಪರಿಧಿ...
ಭೂಮಿಯ ಸುತ್ತ ತುಂಬಿಹುದು ಜಲಧಿ...
ಬಾಳಬೇಕು ಎಲ್ಲರ ಮುಂದೆ ಛಲಧಿ... ||೪ ||
ನೀ ಧರಿಸಿದ ವಸ್ತ್ರ ಹಚ್ಚ ಹಸಿರು..
ಸತ್ಯ, ಧರ್ಮ, ನ್ಯಾಯವೇ ನಿನ್ನ ಉಸಿರು...
ಎರಚಬೇಡ ಯಾರ ಮೇಲೂ ನೀ ಕೆಸರು..
ಕೈ ಕೆಸರಾದರಲ್ಲವೇ ಬಾಯಿ ಮೊಸರು...||೫ ||
ನೀ ಉಡುವ ವಸ್ತ್ರದ ಬಣ್ಣ ಬೂದು ..
ಬಾಳು ನೀ ಗಂಧದ ಕೊರಡಿನಂತೆ ಜೀವನ ತೇದು ..
ಶ್ರದ್ದೆಯಿಟ್ಟು ಪಾಠ ಪ್ರವಚನ ನೀ ಓದು ...
ಪರಿಶ್ರಮವಿರೆ ಕಷ್ಟಗಳೆಂದೂ ನಿನಗೆ ಬರದು..||೬||
ಹೆಂಗೆಳೆಯರ ಜಡೆಯಲ್ಲಿ ಇರಬೇಕು ಒಂದು ಗುಲಾಬಿ
ಹೂವಿದ್ದರೆ ತಾನೇ ಹತ್ತಿರ ಬರುವುದು ದುಂಬಿ..
ರೈಲು ಬಿಡಬಹುದು ನೀನು ಇಲ್ಲದಿದ್ದರೂ ಕಂಬಿ..
ಪರೀಕ್ಷೆ ಬರೆಯಿರಿ ನೀವು ನಾ ಮಾಡಿದ ಪಾಠ ನಂಬಿ... ||೭ ||
ಬಹಳ ಇಷ್ಟ ನನಗೆ ಬಣ್ಣ ನೇರಳೆ ..
ದಟ್ಟ ಕಾಡಿದ್ದರೆ ತಾನೆ ಸುರಿಯುವುದು ಮಳೆ ..
ಮಳೆ ಬಂದರೆ ತಾನೇ ಬಂಗಾರ ಬೆಳೆ ..
ಹಚ್ಚ ಹಸುರಿನಿಂದ ನಲಿಯುವುದು ಇಳೆ ..||೮||
ನೀ ಉಡುವ ವಸ್ತ್ರದ ಬಣ್ಣ ಕೇಸರಿ ...
ಸಿಟ್ಟು ಬಂದರೂ ಎಂದು ತಣ್ಣಗೆ ಇರಿ...
ಬೇರೆಯವರ ಭಾಗ್ಯ ನೋಡಿ ಪಡಬೇಡಿ ಉರಿ..
ಛಲ ಬೇಕು ಸಾಧಿಸಲು ನೀವಿಟ್ಟ ಗುರಿ ..||೯||
...
ಡಾ.ಎನ್ ಕೆ ಎಸ್
Негізгі бет nks ಕವನ 5
Пікірлер