dasarahadugalu...
ಭಜನೆ, ದಾಸರ ಹಾಡುಗಳು, ದಾಸರ ಪದಗಳು, ದಾಸ ಸಾಹಿತ್ಯ
Bhajane, Dasara Hadugalu, Padagalu, Dasa Sahitya
ಸಾಹಿತ್ಯ : ಹೆಳವನಕಟ್ಟೆ ಗಿರಿಯಮ್ಮ
Kruti: Helavanakatte Giriyamma
Singer: Gayathri Sudarshan
ಗಾಯಕರು: ಗಾಯತ್ರೀ ಸುದರ್ಷನ್
ಆಡುತ ಬಾರಮ್ಮ | ನಲಿ ನಲಿದಾಡುತ ಬಾರಮ್ಮ ||ಪ||
ಆಡುತ ವರಗಳ ನೀಡುತ ಕರುಣದಿ |
ನೋಡುತ್ತಾ ದಯದಿಂದಾ ಲಕ್ಷ್ಮೀ ||ಅಪ||
ಬೇಸರವು ಬೇಡಮ್ಮಾ ದಾಸರ ದಾಸಿಯು ನಾ
ನಿಮ್ಮ ವಾಸನ ಪೂರಿತೆ ವನರುಹನೇತ್ರೆ |
ಸಾಸಿರ ನಾಮದ ವಾಸುದೇವನ ಸತಿ ||೧||
ಕರೆದರೆ ಓ ಎಂದು ತಾಯೆ ಎನ್ನ ಮೊರೆಯ ಲಾಲಿಸೆ ನೀ ಬಂದು |
ದುರಿತಗಳನೆಲ್ಲಾ ಪರಿಹರಿಸುವ ನಿಮ್ಮ
ಕರುಣಾಮೃತವನು ಸ್ಮರಿಸುವೆ ಅನುದಿನ ||೨||
ಧರೆಯೊಳುನ್ನತವಾದ ಹೆಳವನ ಕಟ್ಟೆ ಗಿರಿಯೊಳು ನೆಲೆಸಿದ |
ಪರಮ ಪವಿತ್ರಳೆ ಕರುಣಾ ಸಿಂಧುವೆ |
ವರವನು ಕೊಡುತ್ತಾ ಬೇಗದಿಂದಲಿ ||೩||
ADuta bAramma | nali nalidADuta bAramma ||pa||
ADuta varagaLa nIDuta karuNadi |
nODuttA dayadiMdA lakShmI ||apa||
bEsaravu bEDammA dAsara dAsiyu nA
nimma vAsana pUrite vanaruhanEtre |
sAsira nAmada vAsudEvana sati ||1||
karedare O eMdu tAye enna moreya lAlise nI baMdu |
duritagaLanellA pariharisuva nimma
karuNAmRutavanu smarisuve anudina ||2||
dhareyoLunnatavAda heLavana kaTTe giriyoLu nelesida |
parama pavitraLe karuNA siMdhuve |
varavanu koDuttA bEgadiMdali ||3||
Негізгі бет ಆಡುತ ಬಾರಮ್ಮ | ಹೆಳವನಕಟ್ಟೆ ಗಿರಿಯಮ್ಮ | Aaduta Baramma | Helavanakatte Giriyamma | Gayathri | Bhajane
Пікірлер: 11