ಸರ್ವರಿಗೂ ಶ್ರೀ ನರಸಿಂಹ ಜಯಂತಿಯ ಹಾರ್ದಿಕ ಶುಭಾಶಯಗಳು 🙏
ಕಾರ್ಪರ ನರಹರಿದಾಸರು
ದೇವದೇವತೆಗಳ ಸ್ತುತಿ
ವೀರನ ನೋಡಿರೈ ನರಮೃಗಾಕಾರನ ಪಾಡಿರೈ ಪ
ಕಾರ್ಪರ ಋಷಿ ತಪಕೊಲಿದು ಅಶ್ವತ್ಥದಿ ಮೆರೆವಾ
ಭಕುತರ ಪೊರೆವಾ ಅ.ಪ
ಚಾರು ಚರಣಯುಗಳಾರಾಧಿಸುವರ ದುರಿತ ತಿಮಿರಕೆ ಸವಿತ
ವಾರಿಜಭವ ತ್ರಿಪುರಾರಿ ಮುಖಸುರ ವ್ರಾತ ಸೇವಿತ ತ್ವರಿತ
ನಾರಾಯಣ ಮುನಿ ಪೂಜೀತ ಪದ
ಮಧ್ಬಂಧು ಪೊರೆಯೊನೀನೆಂದು
ಪ್ರಾರ್ಥಿಸುವರಿಗಭೀಷ್ಟಿಯಗರಿಯಲು ದೇವ ತರುಸ್ವಭಾವ 1
ಉಗ್ರನಾದರು ಭಕುತಾಗ್ರಣಿಗಳಿಗೆ ಅನುಗ್ರ ಒಲಿವನು ಶೀಘ್ರ
ವಾಗ್ಧೇವಿಯರ ಸನಾಜ್ಞದಿ ನಮಿಸಿ ಪ್ರಹ್ಲಾದ ಸ್ತುತಿಸಲು ಒಲಿದ
ಉಗ್ರವದನ ಶಾಲಿಗ್ರಾಮಗಳ ರೂಪದಲಿ ವೃ-
ಕ್ಷಾಗ್ರದಲಿ ಭಾರ್ಗವಿ ರಮಣನನುಗ್ರಹಿಸಲು ಭಕುತರನ
ಪ್ರಕಟನಾಗಿಹನ 2
ಸ್ಥಿರಚರದೊಳು ತನ್ನಿರುವಿಕೆಯೆನು ಬುಧಜನಕೆ
ತೋರಿಸುವದಕೆ
ಸುರುಚಿರÀ ಷೋಡಶಕರಗಳಿಂದಾಯುಧ ಧರಿಸಿ
ಅಸುರನ ಮಥಿಸಿ
ತರುಮೂಲದಳೊವತರಿಸಿ ಚಕ್ರಾಂಕಿತಶಿಲದಿ
ನೆಲಸಿಕರುಣದಿ
ಶರಣು ಜನಕೆ ಪರಿಹರಿಸ್ಯಭಯ ನೀಡುವನ
ದಿವಿಜರೊಡೆಯನ3
ಕ್ಷೋಣಿಯೋಳು ಈ ಸ ಸ್ಥಾನ ದರ್ಶನದಿ ಮನುಜನ
ಪೋಪುದು ವೃಜಿನ
ಸ್ಥಾನದ ಮಹಿಮೆ ಪುರಾಣದಿ ಪೇಳಿರುವದನ
ತಿಳಿವದು ಮುನ್ನ
ಭಾನು ಕರ್ಕಾಟಸ್ಥಾನದಿ ಬರುವ ಕಾಲದಲಿ ತೀರ್ಥಗಳಲ್ಲಿ
ಸ್ನಾನ ಜಪಾನುಷ್ಠಾನ ಮಾಳ್ವರಿಗೆ ಒಲಿವ
ಹೃದಯದಿ ಪೊಳಿವ 4
ಚಾರು ಶ್ರೀಕೃಷ್ಣಾತೀರದಿ ಮೆರೆವಾಶ್ವತ್ಥ
ತರುವರ ಸಂಸ್ಥಾ
ನಾರದ ಮುನಿ ಸಂಕೀರ್ತಿತ ಪಾವನ
ಚರಿತ ತ್ರಿಗುಣಾತೀತ
ಕಾರ್ಪರ ನಿಲಯ ಶ್ರೀನಾರಸಿಂಹನ
ಪದಯುಗಲ ಬಿಡದನುಗಾಲ
ಸಾರಿ ಭಜಿಪರಿಗಪಾರ ಸೌಖ್ಯಗಳ ಗರಿವ ವಿಘ್ನವ ತರಿವ5
Негізгі бет Veeranna nodirai / ವೀರನ್ನ ನೋಡಿರೈ ನರಮೃಗಾಕಾರನ್ನ ಪಾಡಿರೈ / karpara narasimha
Пікірлер: 21