#kateeltemple #kateel
ಪಾಲಿಸೆ ವರ ಮಾಲೆಯ ಭ್ರಾಮರಿ| ಚರಣ ಪಲ್ಲವ ಕುಸುಮವ
ವರದ ಹಸ್ತದ ಪುಷ್ಪವಾ || ಉಡಿಯ ಮಲ್ಲಿಗೆ ಕರದ ತಾವರೆ
ವರ ಪ್ರಸಾದದ ಮಾಲೆಯ ||ಪಾಲಿಸೆ||
ಶರಣರನ್ನು ಪೊರೆಯಲೆಂದೆ ಧರೆಗೆ ಬಂದು ನಿಂತೆಯ|
ಕಟೀಲ ರಾಣಿ ಕುಸುಮವೇಣಿ| ನಿನ್ನ ಪಾದದ ಪಂಕಜಾ
ಗಂಧ ಘಮಘಮ ಹೂದಂಡೆಯಾ| ಮುಡಿಯ ಸಂಪಿಗೆ ಕರದ ಕೇದಗೆ ವರ ಪ್ರಸಾದದ ಮಾಲೆಯ||ಪಾಲಿಸೆ||
ಬೇಡಿದವರಿಗೆ ನೀಡಲೆಂದೆ ಭುವಿಗೆ ಓಡಿ ಬಂದೆಯಾ|
ಕಟೀಲ ಅಂಬೆ ಸುಂದರಾಂಬೆ| ಪರಮ ಚರಣದ ಪುಷ್ಪವ
ಗಂಧ ಸಂಭ್ರಮ ದಂಡೆಯ| ಮುಡಿಯ ನೈದಿಲೆ ಕರದ ರಂಜೆ
ವರ ಪ್ರಸಾದದ ಮಾಲೆಯ||ಪಾಲಿಸೆ||
ಧರೆಯ ಭಾರವ ಇಳುಹಳೆಂದೆ ದುಂಬಿ ರೂಪದಿ ಬಂದೆಯಾ|
ಕಟೀಲ ಕಣ್ಮಣಿ ಮಧುಮನೋನ್ಮಣಿ| ನಿನ್ನ ಅಡಿಗಳ ಹೂಗಳ
ಘನ್ನ ಮಹಿಮನ ಪ್ರಸಾದವ| ಮುಡಿಯ ಸೇವಂತಿ ಕರದ ನಂದಿನಿ ವರ ಪ್ರಸಾದದ ಮಾಲೆಯ ||ಪಾಲಿಸೆ||
Негізгі бет Музыка ಪಾಲಿಸೇ ವರಮಾಲೆಯಾ | Paalise Varamaleya | Utsahi Bolma
Пікірлер: 50