Lakshmiya poojeya haadu.
ವಿಡಿಯೋ ಕೃಪೆ : ಶ್ರೀಮತಿ ವಿಜಯಲಕ್ಷ್ಮಿ ಎಮ್ ರಾವ್
ಪೂಜಿಪೆನೇ ನಿನ್ನ ಜಾಜಿ ಪುಷ್ಪಗಳಿಂದ
ಮೂಜಗನ್ಮಾತೆಯೇ
ಅಮರಾದಿ ಸುರರಿಂದ ಅಭಿವಂದಿತೆ ನಿನ್ನ ಚರಣಾಂಬುಜವ ತೋರಿ ಪಾವನ ಮಾಡೆಂದು
ಪೂಜಿಪೆನೇ ನಿನ್ನ
ಅಂಬುಜಾಕ್ಷಿಯೇ ನಿನಗೆ ಚಿನ್ನದ ಕುಂಭದಿಂದ ಅಭಿಷೇಕ ಮಾಡುವೆನು
ಪೀತಾಂಬರವುಟ್ಟು ಸರ್ವಾಭರಣವನಿಟ್ಟು ವರಮಣಿ ಮಂಟಪಕೆ ಬಾರೇ ನಾರಾಯಣಿ
ಪೂಜಿಪೆನೇ ನಿನ್ನ
ಅರ್ಘ್ಯ ಪಾದ್ಯಾಚಮನ ಮಧುಪರ್ಕದಿಂದಲಿ ಅಗ್ರಪೂಜೆಯಗೈಯುವೆ
ಸಮುದ್ರಸುತಳೆ ಶುದ್ಧ ಮನಸಿಲೆ ನಿನಗೆ ಶುಭ್ರವಾದ ವಸ್ತ್ರವನರ್ಪಿಸುವೆನಮ್ಮಾ
ಪೂಜಿಪೆನೇ ನಿನ್ನ
ಅರಿಶಿನ ಕುಂಕುಮ ಕರದಲ್ಲಿ ಪಿಡಿದೆತ್ತಿ ಹರುಷದಿಂದೇರಿಸುವೆ
ವರಮಹಾಲಕ್ಷ್ಮಿಯೇ ವರಗಳ ನೀಡೆಂದು ಶಿರಬಾಗಿ ನಮಿಸುವೆ ಕರವೀರಪುರನಿಲಯೇ
ಪೂಜಿಪೆನೇ ನಿನ್ನ
ಮಲ್ಲಿಗೆ ಕೇದಿಗೆ ಕಲ್ಹಾರ ಪುಷ್ಪ ತಂದು ಎಲ್ಲಾ ಸಮರ್ಪಿಸುವೆ
ಬಲ್ಲಿದ ಭಕ್ತರಭೀಷ್ಠವ ಸಲ್ಲಿಸೆಂದು ವೈಕುಂಠ ಕೊಲ್ಹಾಪುರದಲ್ಲಿರುವ ತಾಯೇ
ಪೂಜಿಪೆನೇ ನಿನ್ನ
ಸಡಗರದಿಂದಲಿ ಮಡದಿಯರೆಲ್ಲರೂ ಉಡಿಯ ತುಂಬುವರಮ್ಮಾ
ಬಿಡಿಬಿಡಿ ಮಲ್ಲಿಗೆ ನಡೆಮುಡಿಗ್ಹಾಕಲು ಸಡಗರದಿಂದಲಿ ನಡೆದುಬಾರಮ್ಮ ತಾಯೇ
ಪೂಜಿಪೆನೇ ನಿನ್ನ
ಶೇಷಶಯನರಾಣಿ ದೋಷವರ್ಜಿಸು ಎಂದು ಮೀಸಲು ತಂದಿರುವೆ
ಪಾಯಸ ಮೃಷ್ಟಾನ್ನ ಸಂತೃಪ್ತಳಾಗುಂಡು ಅಷ್ಟೈಶ್ವರ್ಯವ ನೀಡು ಲಕ್ಷ್ಮೀದೇವಿಯೇ ಎನಗೆ
ನಿತ್ಯತೃಪ್ತಳೇ ನಿನಗೆ ಮುತ್ತಿನಾರತಿ ಎತ್ತಿ ಭಕ್ತಿಯಿಂದೆರಗುವೆನು
ದಂಪತ್ತು ಸಂಪತ್ತು ಹತ್ತು ಮಕ್ಕಳನಿತ್ತು ಆಪತ್ತು ಬಿಡಿಸಮ್ಮಾ ಆದಿನಾರಾಯಣೀ
ಪೂಜಿಪೆನೇ ನಿನ್ನ
Негізгі бет poojipene ninna jaaji pushpagalinda/ ಪೂಜಿಪೆನೇ ನಿನ್ನ ಜಾಜಿ ಪುಷ್ಪಗಳಿಂದ ಮೂರ್ಜಗನ್ಮಾತೆಯೇ
Пікірлер: 9