ದೇವರನಾಮ
ರಾಗ :ಮಧ್ಯಮಾವತಿ
ರಚನೆ: ಅನಂತ ದ್ರೀಶ ದಾಸರು
ಗಾಯನ : ಶ್ರೀಮತಿ ರಶ್ಮಿ ಆದೀಶ್
ಪೂಜಿಪೆನೆ ನಿನ್ನ ಜಾಜಿ ಪುಷ್ಪಗಳಿಂದ ಮೂರ್ಜಗ ನ್ ಮಾತೆಯು ನೀ
ಅಮರಾರಿ ಸುರರಿಂದ ಅಭಿವಂದಿತೆ ನಿನ್ನ
ಚರಣಾ೦ ಭುಜವತೋರಿ ಪಾವನ ಮಾಡೆನ್ನ
ಅಂಬುಜಾಕ್ಷಿ ಯೆ ನಿನಗೆ ಚಿನ್ನದ ಕುಂಭದಿಂದ ಅಭಿಷೇಕ ಮಾಡುವೆನು ಪೀತಾಂಬರವನುಟ್ಟುಸರ್ವಾಭರಣ ವಿತ್ತು ವರಮಾಲೆ ಮಂಟಪಕ್ಕೆ ಬಾರೆ ನಾರಾಯಣಿ
ಅರಿಶಿನ-ಕುಂಕುಮ ಕಲ್ಹಾರ ಪುಷ್ಪಗಳು ಎಲ್ಲಾ ಸಮರ್ಪಿಸುವೆ ಬಲ್ಲಿದ ಭಕುತರ ಅಭಿಷ್ಟ ವ ಸಲ್ಲಿಸೆಂದು ವೈಕುಂಠ ಕೊಲ್ಲಾಪುರ ದಿ ನೆಲೆಸಿರುವೆ ತಾಯೆ
ಅರ್ಘ್ಯ ಪಾದ್ಯ ಆಚಮನ ಮಧುಪರ್ಕದಿಂದಲಿ ಅಗ್ರಪೂಜೆಯ ಗೈವೇ ಸಮುದ್ರ ಸುತ್ತಳೆಶುದ್ಧವಾದ ಮನಸ್ಸಿನಿಂದ ಶುಭ್ರವಾದ ವಸ್ತ್ರವನ್ನು ಅರ್ಪಿಸುವೆನು
ಸಡಗರದಿಂದ ಲೀ
ಮಡದಿಯ ರೆಲ್ಲರೂ ಉಡಿಯ ತುಂಬುವ ರಮ್ಮ
ಬಿಡಿ ಬಿಡಿ ಮಲ್ಲಿಗೆನಡೆಮುಡಿ ಹಾಸುವೆ ಕಡಲಾಬ್ಧಿ ಶಯನಳೆನಡೆದು ಬಾರಮ್ಮ ತಾಯೆ
ಶೇಷಶಯನ ರಾಣಿ ದೋಷ ವರ್ಜಿಸು ಎಂದು ಮೀಸಲು ತಂದಿಹೆನು ಪಾಯಸ ಮೃಷ್ಟಾನ್ನ ಸಂತೃಪ್ತಳಾಗಿ ಉಂಡು ಅಷ್ಟೈಶ್ವರ್ಯವನೀ ಡೆ ಲಕ್ಷ್ಮೀದೇವಿಯೆ ನೀನು
ನಿತ್ಯತೃಪ್ತಳೆ ನಿನಗೆ ಮುತ್ತಿನಾರತಿ ಎತ್ತಿ ಭಕ್ತಿಯಿಂದೆರಗುವೆನು
ಸಂಪತ್ತು ದಂಪತ್ತು ಹೆತ್ತ ಮಕ್ಕಳಿಗಿತ್ತು
ಆಪತ್ತು ಬಿಡಿಸಮ್ಮ
ಅನಂತಾದ್ರೀಶ ನ ರಾಣಿ
Негізгі бет Lakshmi song # poojipe ne ninna # Dasara pada by Rashmi adish lyrics in discription box
Пікірлер: 52