#bhajan #bhajane #bhajansong #bhajanmusic
ಏನು ಧನ್ಯಳೋ ಲಕುಮಿ
ಎಂಥಾ ಮಾನ್ಯಳೋ ... ||ಏನು||
ಸಾನುರಾಗದಿಂದ ಹರಿಯ
ತಾನೆ ಸೇವೆ ಮಾಡುತಿಹಳು ||ಸಾನುರಾಗ||
||ಏನು ಧನ್ಯಳೋ||
ಕೋಟಿ ಕೋಟಿ ಭೃತ್ಯರಿರಲು
ಹಾಟಕಾಂಬರನ ಸೇವೆ ||ಕೋಟಿ||
ಸಾಟಿಯಿಲ್ಲದೆ ಪೂರ್ಣಗುಣನ
ಶ್ರೇಷ್ಠವಾಗಿ ಮಾಡುತಿಹಳು ||ಸಾಟಿ||
||ಏನು ಧನ್ಯಳೋ||
ಛತ್ರ ಚಾಮರ ವ್ಯಜನ ಪರ್ಯಂಕ
ಪಾತ್ರರೂಪದಲ್ಲಿ ನಿಂತು||ಛತ್ರ||
ಚಿತ್ತಚರಿತನಾದ ಹರಿಯ
ನಿತ್ಯಸೇವೆ ಮಾಡುತಿಹಳು||ಚಿತ್ತ||
||ಏನು ಧನ್ಯಳೋ||
ಸರ್ವಸ್ಥಳದಿ ವ್ಯಾಪ್ತನಾದ
ಸರ್ವದೋಷರಹಿತನಾದ ||ಸರ್ವಸ್ಥಳ||||
ಗರುಡಗಮನನಾದ ಪುರಂದರವಿಠ್ಠಲನ್ನ
ಸೇವಿಸುವಳು||ಗರುಡ||
||ಏನು ಧನ್ಯಳೋ||
Негізгі бет Ойын-сауық ಏನು ಧನ್ಯಳೋ ಲಕುಮಿ | Enu Dhanyalo Lakumi | Utsahi Bolma
Пікірлер: 72